ನೆಲಮಂಗಲ ಪಟ್ಟಣದಲ್ಲಿ ಸಾರ್ವಜನಿಕರನ್ನು ನಡುಕ ಹುಟ್ಟಿಸುವಂತಹ ವಿಕೃತ ಘಟನೆಯೊಂದು ನಡೆದಿದೆ. ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಮೂಕ ಪ್ರಾಣಿಯಾದ ಹಸುವಿನ ಮೇಲೆ ಅತ್ಯಾಚಾರ ಎಸಗಿದ ವಿಕೃತ ಕಾಮಿಯನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ ನಿಜಾಮುದ್ದೀನ್ (25) ಎಂದು ಗುರುತಿಸಲಾಗಿದೆ. ಈತ ನೆಲಮಂಗಲದಲ್ಲಿ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವೇಳೆ, ಸ್ಥಳೀಯರು ಇದನ್ನು ಗಮನಿಸಿದ್ದಾರೆ. ಆರೋಪಿಯ ಈ ಹೇಯ ಕೃತ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ ಫೋನ್‌ನಲ್ಲಿ ದೃಶ್ಯ ಸಮೇತ ಸೆರೆ ಹಿಡಿದಿದ್ದಾರೆ.ಪಾಪಿ ಆರೋಪಿ ಪೊಲೀಸರ ವಶಕ್ಕೆ ಕಾಮುಕ ನಿಜಾಮುದ್ದೀನ್‌ನ ವಿಕೃತ ಕೃತ್ಯ ಕಂಡು ಕೆರಳಿದ ಸ್ಥಳೀಯರು, ಆತನನ್ನು ತಕ್ಷಣವೇ ಹಿಡಿದು ಥಳಿಸಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮೂಕ ಪ್ರಾಣಿಯ ಮೇಲಿನ ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

