Breaking News

ಮಡಿಕೇರಿ: ತಮ್ಮದೇ ಕಚೇರಿ ಸಿಬ್ಬಂದಿಯಿಂದ ಲಂಚ ಪಡೆದ ಇಬ್ಬರ ಬಂಧನ

ಕೊಡಗು ಜಿಲ್ಲೆಯ ಮಡಿಕೇರಿಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇರೆಗೆ ಕಚೇರಿ ಮ್ಯಾನೇಜರ್ ವೈದ್ಯನಾಥ್ ಹಾಗೂ ಎಸ್‌ಡಿಎ ಸೋಮಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅಮಾನತುಗೊಂಡಿದ್ದ ಗ್ರೂಪ್ ‘ಡಿ’ ನೌಕರ ಶರತ್‌ಗೆ ನಿಯಮಾನುಸಾರ ಅರ್ಧ ಸಂಬಳ ಬಿಡುಗಡೆ ಮಾಡಲು ವೈದ್ಯನಾಥ್ ₹5 ಸಾವಿರ ಹಾಗೂ ಸೋಮಣ್ಣ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಇಬ್ಬರೂ ಈಗಾಗಲೇ ₹5 ಸಾವಿರ ಲಂಚ ಪಡೆದಿದ್ದರೆಂದು ಆರೋಪಿಸಲಾಗಿದೆ. ಶರತ್ ನೀಡಿದ ದೂರಿನ ಮೇರೆಗೆ ಉಳಿದ ₹2 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ವೈದ್ಯನಾಥ್ ಸಿಕ್ಕಿಬಿದ್ದಿದ್ದು, ರಜೆಯಲ್ಲಿದ್ದ ಸೋಮಣ್ಣನನ್ನೂ ಈಗಾಗಲೇ ಲಂಚ ಪಡೆದ ಆರೋಪದಡಿ ಬಂಧಿಸಲಾಗಿದೆ. ಲೋಕಾಯುಕ್ತ ಡಿವೈಎಸ್‌ಪಿ ದಿನಕರಶೆಟ್ಟಿ ಹಾಗೂ ಇನ್‌ಸ್ಪೆಕ್ಟರ್ ವೀಣಾನಾಯಕ ಕಾರ್ಯಾಚರಣೆ ನಡೆಸಿದರು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *