ಬೆಂಗಳೂರು ಮೂಲದ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ₹1,906 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಈಡಿ) ಆನ್‌ಲೈನ್ ಬೆಟ್ಟಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಪ್ತಿ ಮಾಡಿದೆ. ತನಿಖೆಯ ಪ್ರಕಾರ, ವಿವಿಧ ರಮ್ಮಿ ಅಪ್ಲಿಕೇಷನ್‌ಗಳ ಮೂಲಕ ಸುಮಾರು 3 ಕೋಟಿ ಗ್ರಾಹಕರನ್ನು ಸೆಳೆದು, ಸ್ವಯಂಚಾಲಿತ ಪ್ರೋಗ್ರಾಂಗಳ ಸಹಾಯದಿಂದ ಆಟಗಾರರಿಗೆ ನಷ್ಟವಾಗುವಂತೆ ಮಾಡಿ ಅಕ್ರಮ ಲಾಭ ಗಳಿಸಲಾಗುತ್ತಿತ್ತು. ಆಟಗಾರರನ್ನು ಸೆಳೆಯಲು ₹1,035 ಕೋಟಿ ಜಾಹೀರಾತಿಗೆ ಖರ್ಚು ಮಾಡಲಾಗಿತ್ತು. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಈಡಿ ತನಿಖೆ ಆರಂಭಿಸಿದ್ದು, ಅಕ್ರಮ ಹಣವನ್ನು ಆಸ್ತಿ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿ ಮರೆಮಾಚಲಾಗಿದೆ ಎಂಬ ಆರೋಪದಡಿ ಮುಂದಿನ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

