Breaking News

ಹೂವಿನಹಡಗಲಿ: ದುಷ್ಕರ್ಮಿಯಿಂದ ಎಸ್ ಬಿಐ ಎಟಿಎಂನಲ್ಲಿ ದಾಂಧಲೆ

ಹೂವಿನಹಡಗಲಿ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ (SBI) ಎಟಿಎಂ ದುಷ್ಕರ್ಮಿಯೊಬ್ಬ ಧ್ವಂಸ ಮಾಡಿರುವ ಘಟನೆ ಶನಿವಾರ ನಸುಕಿನ ವೇಳೆ ನಡೆದಿದೆ. 2 ಗಂಟೆಯ ನಂತರ ಘಟನೆ ನಡೆದಿದ್ದು, ದುಷ್ಕರ್ಮಿಯು ಎಟಿಎಂ ಗ್ಲಾಸ್ ಒಡೆದಿರುವುದು ಮಾತ್ರವಲ್ಲದೆ, ಪಾಸ್ ಬುಕ್ ಪ್ರಿಂಟ್ ಮಾಡುವ ಯಂತ್ರವನ್ನು ಧ್ವಂಸ ಮಾಡಿದ್ದಾನೆ. ಬಾಗಿಲ ಬಳಿ ಸಿಬಂದಿ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸುವ ಪತ್ರ ಸಹ ಹಾಕಿ ಹೋಗಿದ್ದಾನೆ. ಎಟಿಎಂ ಯಂತ್ರಕ್ಕೆ ಯಾವುದೇ ಹಾನಿ ಮಾಡಿಲ್ಲ ಎಂದು ತಿಳಿದು ಬಂದಿದೆ.ಈ ಎಲ್ಲ ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಶಶಿ ಕುಮಾರ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಆಸ್ತಿ ನಷ್ಟ ಹಿನ್ನಲೆಯಲ್ಲಿ ಪ್ರಕರಣ ದಾಖಲು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಈ ಹಿಂದೆಯೂ ಇದೆ ರೀತಿ ಕೃತ್ಯ ಎಸಗಿದ್ದ ಎಂದು ಹೇಳಲಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *