ಬ್ರಹ್ಮಾವರ: ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಮನೆ ಕೆಲಸದಾಕೆ ಕಳವು ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೂರಿನ ಆಶಾ ಎಸ್. ಪೂಜಾರಿ ಎಂಬವರು ಹೇರೂರು ಗ್ರಾಮದಲ್ಲಿ ರುವ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ಆರೂರಿನ ಲತಾ ಎಂಬವರನ್ನು ನೇಮಿಸಿದ್ದು, ಎ.1ರಂದು ಮನೆಯ ಕಪಾಟಿನಲ್ಲಿಟ್ಟಿದ್ದ ತಂದೆಯ 25 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ ಕಳವಾಗಿರುವುದು ಕಂಡುಬಂದಿದೆ. ಬಳಿಕ ಮನೆ ಕೆಲಸದಾಕೆ ಲತಾಳನ್ನು ವಿಚಾರಿಸಿದಾಗ ತಾನು ಚಿನ್ನವನ್ನು ತೆಗೆದು ಅಡವಿಟ್ಟಿರುವುದಾಗಿ ತಿಳಿಸಿದ್ದು, ಅದನ್ನು ಬಿಡಿಸಿ ಕೊಡುವುದಾಗಿ ಹೇಳಿದ್ದಳು. ಆದರೆ ಲತಾ ಚಿನ್ನವನ್ನು ಬಿಡಿಸಿಕೊಡದೆ ಮೋಸ ಮಾಡಿರುವು ದಾಗಿ ದೂರಲಾಗಿದೆ. ಕಳವಾದ ಚಿನ್ನದ ಮೌಲ್ಯ 3,50,000ರೂ. ಎಂದು ಅಂದಾಜಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

