Breaking News

ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಮಹೀಂದ್ರಾ XUV300 ಕಾರು ಸ್ಫೋಟಗೊಂಡಿದೆ. ಹಿಪ್ಪರಗಿಯ ಯುವರಾಜ ವೈನ್ ಸ್ಟೋರ್ ಮಾಲೀಕ ಕಮ್ ಮ್ಯಾನೇಜರ್ ಹನುಮಂತ ಅಥಣಿ ಅವರ ಕಾರು ನಿನ್ನೆ ಸಂಜೆ 4:30ಕ್ಕೆ ವೈನ್ ಸ್ಟೋರ್ ಎದುರು ನಿಲ್ಲಿಸಲಾಗಿದ್ದು, ರಾತ್ರಿ 10:45ರ ಸುಮಾರಿಗೆ ಏಕಾಏಕಿ ಕಾರು ಸ್ಫೋಟಗೊಂಡಿದೆ. ಘಟನೆಯ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಒಸಿಒ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಸ್ಟೋಟದ ಶಂಕೆ ವ್ಯಕ್ತವಾಗಿದ್ದು ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇನ್ನು ಈ ಕಾರು ಬ್ಲಾಸ್ಟ್‌ ಘಟನೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *