ನಗರದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಂತಕರು ಆಪ್ರಿಕನ್ ಮಹಿಳೆಯ ಹತ್ಯೆ ಮಾಡಿದ್ದಾರೆ. ಬೇರೆಡೆ ಹತ್ಯೆ ಮಾಡಿ ಚಿಕ್ಕಜಾಲ ವ್ಯಾಪ್ತಿಯಲ್ಲಿ ಮೃತದೇಹ ತಂದು ಬಿಸಾಡಿದ್ದಾರೆ ಎನ್ನಲಾಗಿದೆ. ಲೋವಿತ್ ಕೊಲೆಯಾಗಿರುವ ವಿದೇಶಿ ಮಹಿಳೆ ಎನ್ನಲಾಗಿದೆ. ಕೊಲೆಯಾಗಿರುವ ಲೋವಿತ್ ಅವರನ್ನು ಆಫ್ರಿಕಾದ ನೈಜೀರಿಯಾದ ಕ್ರಾಸ್ ರಿವರ್ ರಾಜ್ಯದ ಮಹಿಳೆ ಎಂದು ಗುರುತಿಸಲಾಗಿದೆ. ಪೊಲೀಸರು ಮಹಿಳೆಯ ಹಿನ್ನೆಲೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಬೆಟ್ಟಹಲಸೂರು ಮುಖ್ಯರಸ್ತೆ ಬಳಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

