Breaking News

ಬೆಂಗಳೂರು ಲೀಸ್‌ ಮನೆಗಳ ಬ್ರಹ್ಮಾಂಡ ರಹಸ್ಯ ಬಯಲು: 6 ಬಾರಿ ಜೈಲಿಗೆ ಹೋದ ವಂಚಕನ ಕೈಗೆ ಸಿಕ್ಕೀರಿ ಜೋಕೆ!

ಬೆಂಗಳೂರುದಲ್ಲಿ ಲೀಸ್ ಮನೆ ಹುಡುಕುವವರನ್ನೇ ಗುರಿಯಾಗಿಸಿಕೊಂಡ ಸರಣಿ ವಂಚಕನೊಬ್ಬ, 100ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ 6 ಬಾರಿ ಬಂಧನಕ್ಕೊಳಗಾಗಿದ್ದರೂ ಜಾಮೀನಿನ ಮೇಲೆ ಹೊರಬಂದು ಮತ್ತೆ ಇದೇ ಕೃತ್ಯ ಮುಂದುವರಿಸಿದ್ದಾನೆ ಎನ್ನಲಾಗಿದೆ. ಆರೋಪಿ ಮೊದಲು ಬಾಡಿಗೆಗೆ ಮನೆ ಪಡೆದು, ಬಳಿಕ ಅದೇ ಮನೆಯನ್ನು NoBroker, OLX ಸೇರಿದಂತೆ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿ ಲೀಸ್‌ಗೆ ಲಭ್ಯವಿದೆ ಎಂದು ಜಾಹೀರಾತು ನೀಡುತ್ತಿದ್ದ. ನಂತರ ಅಮಾಯಕರಿಂದ ₹10 ಲಕ್ಷದಿಂದ ₹20 ಲಕ್ಷದವರೆಗೆ ಲೀಸ್ ಅಡ್ವಾನ್ಸ್ ಪಡೆದು, ಕೆಲವು ತಿಂಗಳು ಬಾಡಿಗೆ ಕಟ್ಟಿದ ಬಳಿಕ ಹಣದೊಂದಿಗೆ ಪರಾರಿಯಾಗುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಬೆನ್ನಲ್ಲೇ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಲೀಸ್‌ಗೆ ಹಣ ನೀಡುವ ಮುನ್ನ ಮನೆಯ ನೈಜ ಮಾಲೀಕರು ಹಾಗೂ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *