ಧಾರವಾಡ : ಇತ್ತೀಚಿನ ದಿನಗಳಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳೇ ಹೆಚ್ಚಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಕುಟುಂಬ ಹಿಂದೂಗಳೊಂದಿಗೆ ಹಿಂದುವಾಗಿ ಮುಸ್ಲಿಂರೊಂದಿಗೆ ಮುಸ್ಲಿಂರಾಗಿ ಬದುಕುತ್ತಿದೆ.ಹೌದು, ಹೀಗೆ ಹಣೆಯಲ್ಲಿ ಹಿಂದೂವಾಗಿ ಕುಂಕುಮ. ತಲೆ ಮೇಲೆ ತಾಜ್ ಹಾಕಿಕೊಂಡು ಮುಸ್ಲಿಂನಾಗಿರುವ ಇವರು ಸುಧೀರ್ ಮುಧೋಳ. ಇವರೊಬ್ಬ ಹಿಂದೂ ಆದರೂ ತಮ್ಮ ಮನೆಯಲ್ಲಿ ಕಳೆದ 40 ವರ್ಷಗಳಿಂದ ಮೊಹರಂ ಹಬ್ಬದಂದು ದಾವಲ್ ಮಲ್ಲೀಕ್ ಪಾಂಜಾಗಳ ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದಾರೆ. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತ. ಈ ಹಬ್ಬವನ್ನು ಹಿಂದೂ, ಮುಸ್ಲಿಂರು ಭಾವೈಕ್ಯತೆಯಿಂದಲೇ ಆಚರಿಸುತ್ತಾರೆ. ಆದರೆ, ಧಾರವಾಡದ ಸುಧೀರ್ ಮುಧೋಳ ಕುಟುಂಬ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಹಿಂದೆ ಮುಧೋಳ ಅವರ ಕುಟುಂಬ ಇರುವ ಜಾಗದಲ್ಲಿ ದಾವಲ್-ಮಲ್ಲೀಕ್ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತಂತೆ. ಹೀಗಾಗಿ, ಸುಧೀರ್ ಅವರ ತಂದೆಯ ಕಾಲದಿಂದಲೂ ಈ ಮನೆಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಪಾಂಜಾಗಳ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತ ಬರಲಾಗಿದೆ. ಮುಸ್ಲಿಂರಂತೆಯೇ ಸುಧೀರ್ ಮುಧೋಳ ಅವರ ಕುಟುಂಬ ಪೂಜಾ ವಿಧಿ ವಿಧಾನಗಳನ್ನು ನೆರೆವೇರಿಸುತ್ತ ಬಂದಿದ್ದಾರೆ.ಒಂದೊಂದು ವರ್ಷ ಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿ ಹಬ್ಬ ಇದ್ದ ಸಂದರ್ಭದಲ್ಲಿ ಮೊಹರಂ ಹಬ್ಬ ಬಂದಿರುತ್ತದೆ. ಆಗಲೂ ಒಂದೆಡೆ ಗಣೇಶನ ಮೂರ್ತಿ ಇನ್ನೊಂದೆಡೆ ದಾವಲ್-ಮಲ್ಲೀಕ್ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗಣೇಶನಿಗೆ ಹಿಂದೂ ಸಂಪ್ರದಾಯದಂತೆ ದಾವಲ್-ಮಲ್ಲೀಕ್ರಿಗೆ ಮುಸ್ಲಿಂ ಸಂಪ್ರದಾಯದಂತೆ ಪೂಜಾ ಪುನಸ್ಕಾರಗಳನ್ನು ಮಾಡುತ್ತ ಬರಲಾಗಿದೆ. ಹಿಂದಿನಿಂದಲೂ ಬಂದ ಸಂಪ್ರದಾಯವನ್ನು ಇವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಮುಧೋಳ ಅವರ ಕುಟುಂಬ ತಮ್ಮ ಮನೆಗೆ ದಾವಲ್-ಮಲ್ಲೀಕ್ ಎಂಬ ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲ ಸುಧೀರ್ ಅವರು ತಮ್ಮ ಇಬ್ಬರು ಮಕ್ಕಳಿಗೆ ದಾವಲರಾಜ್ ಹಾಗೂ ಮಲ್ಲೀಕರಾಜ್ ಎಂಬ ಹೆಸರಿಟ್ಟಿದ್ದಾರೆ. ಒಟ್ಟಾರೆ ಧರ್ಮ-ಧರ್ಮಗಳ ಗಲಾಟೆಗಳ ಮಧ್ಯೆ ಧಾರವಾಡದ ಈ ಮುಧೋಳ ಕುಟುಂಬ ಬಾವೆ.ಕತೆಗೆ ಮಾದರಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





