Breaking News

ಕಳ್ಳತನ ಮಾಡ್ಬೇಕಂತ ಮನ್ಸಿಗೆ ಅನಿಸ್ತು ಮಾಡಿದೆ’: ಯೂಟ್ಯೂಬ್‌ ನೋಡಿ 11 ಮೊಬೈಲ್‌, 9 ಲ್ಯಾಪ್‌ಟಾಪ್‌, 2 ಟ್ಯಾಬ್‌ ಕದ್ದಿದ್ದವ ಅರೆಸ್ಟ್!

ಬೆಂಗಳೂರು (ಜು.29): ಯೂಟ್ಯೂಬ್‌ನಲ್ಲಿ ಕಳ್ಳತನದ ವಿಡಿಯೋಗಳನ್ನು ನೋಡಿ ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಸತೀಯಾ ಅಲಿಯಾಸ್ ಸತ್ಯ ಎಂಬ ಆರೋಪಿ ಬಳಿ 11 ಮೊಬೈಲ್, 9 ಲ್ಯಾಪ್‌ಟಾಪ್ ಹಾಗೂ 2 ಟ್ಯಾಬ್ ಸೇರಿದಂತೆ ಸುಮಾರು ₹20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಚ್‌ಎಸ್‌ಆರ್ ಲೇಔಟ್‌ನ ಮೊಬೈಲ್ ಅಂಗಡಿಯಲ್ಲಿ ನಡೆದ ಕಳ್ಳತನದ ತನಿಖೆ ವೇಳೆ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಸುಮಾರು 600 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಸುಳಿವು ಪತ್ತೆಹಚ್ಚಿದರು. ಬಳಿಕ ಸುಮಾರು 350 ಕಿ.ಮೀ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾದರು. ವಿಚಾರಣೆ ವೇಳೆ “ಕಳ್ಳತನ ಮಾಡಬೇಕು ಅನಿಸಿತು, ಅದಕ್ಕಾಗಿ ಮೊಬೈಲ್ ಕಳವು ಮಾಡಿದೆ. ಬೇರೆ ಯಾವುದೇ ಉದ್ದೇಶ ಇರಲಿಲ್ಲ” ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *