Breaking News

ಗಾಂಜಾ ಗಿರಾಕಿಗಳು ಅಂದರ್: ರಾಜಸ್ಥಾನ ಟು ಹುಬ್ಬಳ್ಳಿ ಎಲ್ಲಿಂದ ಬಂದು ಏನ ಮಾಡಿದ್ರು ನೋಡಿ…

ಹುಬ್ಬಳ್ಳಿ : ಅಫೀಮ್ ಮತ್ತು ಆಫೀಮ್ ಗಿಡದ ಪವಡರ್ ಪೊಪೆಸ್ಟ್ರಾ’ ಹೆಸರಿನ ಮಾದಕ ವಸ್ತುಗಳನ್ನು ಹುಬ್ಬಳ್ಳಿ ಹಾಗೂ ವಿವಿಧ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದ 5 ಜನ ಅಂತರ ರಾಜ್ಯದ ಆರೋಪಿಗಳನ್ನು ಬಂಧಿಸುವಲ್ಲಿ ಕಸಬಾಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಜಸ್ಥಾನ

ಮೂಲದ ಜುಗತರಾಮ್ ಪಟೇಲ್ (22), ಹೀಮಾ ಬಿಶ್ಣೋಯಿ (41), ದನರಾಮ್ ಪಟೇಲ್ (34), ಶ್ರವಣಕುಮಾರ್ ಬಿಶ್ಣೋಯಿ (33), ಓಂಪ್ರಕಾಶ್ ಬಿಶ್ಣೋಯಿ (24) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ನಗರದ ಗಬ್ಬೂರ ಸರ್ಕಲ್ ಬಳಿಯಲ್ಲಿ 1,15000 ಮೌಲ್ಯದ 150 ಗ್ರಾಂ ಅಫೀಮ್ ಮತ್ತು 3 ಕೆಜಿ ಅಫೀಮ್ ಗಿಡದ ಪಾವಡರ್, ಪೊಪೆಸ್ಟ್ರಾ, ಹಾಗೂ 5 ಮೊಬೈಲ್‌ ಫೋನ್, 1,250 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ…

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *