Breaking News

ಮರಣ ಮೃದಂಗ ಬಾರಿಸುತ್ತಿದೆ ಕಪ್ಪು ಸಮುದ್ರ: ಹಡಗಿನಲ್ಲೇ ಉಸಿರು ಬಿಗಿಹಿಡಿದು ಕುಳಿತ 13 ಭಾರತೀಯರು!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಡುವೆ ಕಪ್ಪು ಸಮುದ್ರದ ಚೋರ್ನೊಮೊರ್ಸ್ಕ್ ಬಂದರಿನ ಬಳಿ ನಿಂತಿರುವ ಹಡಗಿನಲ್ಲಿ 13 ಭಾರತೀಯ ನಾವಿಕರು ಸಿಲುಕಿಕೊಂಡಿದ್ದು, ಅವರ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ. ಹಡಗಿನ ಸಮೀಪದಲ್ಲೇ ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಭಾರತೀಯ ನಾವಿಕರ ಒಕ್ಕೂಟ (FSUI) ನಾವಿಕರನ್ನು ತಕ್ಷಣ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಹಾಗೂ ಹಡಗು ಮಾಲೀಕ ಸಂಸ್ಥೆಗೆ ಮನವಿ ಮಾಡಿದೆ. ದಾಳಿಯ ಭೀಕರತೆಯನ್ನು ತೋರಿಸುವ ವಿಡಿಯೋವನ್ನೂ ‘X’ ಖಾತೆಯಲ್ಲಿ ಹಂಚಿಕೊಂಡಿದೆ. ಈವರೆಗೆ ವಿದೇಶಾಂಗ ಸಚಿವಾಲಯ ಅಥವಾ ಹಡಗು ಕಂಪನಿಯಿಂದ ಅಧಿಕೃತ ಸ್ಪಷ್ಟನೆ ಬಂದಿಲ್ಲ. ನಾವಿಕರನ್ನು ಶೀಘ್ರ ರಕ್ಷಿಸುವಂತೆ ಅವರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *