Breaking News

ಮಾದಕವಸ್ತು ತಯಾರಿಕೆ ಜಾಲ: ₹82 ಲಕ್ಷ ವಶ

ಬೆಂಗಳೂರುದಲ್ಲಿ ಅಕ್ರಮವಾಗಿ ಪ್ರಯೋಗಾಲಯ ನಡೆಸಿ ಮಾದಕವಸ್ತು ತಯಾರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿ ₹82.82 ಲಕ್ಷ ನಗದು ಹಾಗೂ 18,000 ಅಮೆರಿಕನ್ ಡಾಲರ್ ವಶಕ್ಕೆ ಪಡೆದಿದೆ. ಈ ದಾಳಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನ ಒಟ್ಟು ಒಂಬತ್ತು ಸ್ಥಳಗಳಲ್ಲಿ ನಡೆದಿದೆ. 2019ರಲ್ಲಿ ಎನ್‌ಸಿಬಿ ನಡೆಸಿದ್ದ ಕಾರ್ಯಾಚರಣೆಯಲ್ಲಿ 25 ಕೆ.ಜಿ ಕೆಟಮೈನ್ ವಶಪಡಿಸಿಕೊಂಡು ಜೆ. ಕಣ್ಣನ್ ಮತ್ತು ಶಿವರಾಜ್ ಅರಸ್ ಅವರನ್ನು ಬಂಧಿಸಿತ್ತು. ಪ್ರಕರಣದ ತನಿಖೆಯಲ್ಲಿ ಹವಾಲಾ ಮೂಲಕ ಕಚ್ಚಾವಸ್ತು ಖರೀದಿ, ಹಣ ವರ್ಗಾವಣೆ ಹಾಗೂ ವಿವಿಧೆಡೆ ಹೂಡಿಕೆ ನಡೆಸಿರುವುದು ಬೆಳಕಿಗೆ ಬಂದಿದ್ದು, ಇ.ಡಿ ತನಿಖೆಯನ್ನು ಮುಂದುವರಿಸಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *