Breaking News

ಆಹ್ವಾನ ಇಲ್ಲದಿದ್ದರೂ ಊಟ ಮಾಡಲು ಮದುವೆಗೆ ಬಂದ ಯುವಕ ಗುಂಡೇಟಿಗೆ ಬಲಿ

ದೆಹಲಿಯ ಶಾಹದರಾದಲ್ಲಿ ಸಿಐಎಸ್‌ಎಫ್ ಹೆಡ್ ಕಾನ್ಸ್ಟೇಬಲ್ ಗುಂಡಿಕ್ಕಿ ಯುವಕನನ್ನು ಕೊಂದಿದ್ದಾರೆ. ಮಾನಸ ಸರೋವರ ಪಾರ್ಕ್ ನ ಡಿಡಿಎ ಮಾರುಕಟ್ಟೆ ಸಮುದಾಯ ಕೇಂದ್ರದ ಬಳಿ ಶನಿವಾರ ಸಂಜೆ ನಡೆದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ.ಡಿಸಿಪಿ ಪ್ರಶಾಂತ್ ಗೌತಮ್ ಈ ಬಗ್ಗೆ ಮಾಹಿತಿ ನೀಡಿದ್ದು, ನ್ಯೂ ಮಾಡರ್ನ್ ಶಾಹದರಾ ನಿವಾಸಿಯಾಗಿರುವ ಯುವಕನಿಗೆ ಮದುವೆ ಸಮಾರಂಭದಲ್ಲಿ ಗುಂಡೇಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದಾ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದ ಕಾನ್ಪುರದ ಸಿಐಎಸ್‌ಎಫ್ ಹೆಡ್ ಕಾನ್ಸ್ಟೇಬಲ್ ಎಂದು ಗುರುತಿಸಿದ್ದು, ಆತನನ್ನು ಬಂಧಿಸಲಾಗಿದೆ. ಮದುವೆ ನಡೆಯುತ್ತಿರುವುದನ್ನು ನೋಡಿದ ಕೊಳಗೇರಿ ಯುವಕ ಊಟ ಮಾಡಲು ಅಲ್ಲಿಗೆ ಬಂದಿದ್ದಾನೆ. ಕಾಂಪೌಂಡ್ ಹಾರಿ ಬರುತ್ತಿದ್ದಂತೆ ಆತನನ್ನು ಸ್ಥಳದಲ್ಲಿದ್ದವರು ತಡೆದಿದ್ದು, ಅಲ್ಲಿದ್ದ ಕಾನ್ಸ್ಟೇಬಲ್ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಯುವಕ ಮೃತಪಟ್ಟಿದ್ದಾನೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *