ತುಮಕೂರು: ಅಧಿಕ ಲಾಭದ ಆಮಿಷ ತೋರಿಸಿ ಸೈಬರ್ ವಂಚಕರು ಕೊರಟಗೆರೆ ತಾಲೂಕಿನ ಸಿಂಗ್ರಿಹಳ್ಳಿಯ ಎಸ್.ಕೆ. ಮಂಜುನಾಥ್ ಅವರಿಂದ ₹20.37 ಲಕ್ಷ ವಂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಷೇರು ಮಾರುಕಟ್ಟೆ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರನ್ನು ವಾಟ್ಸ್‌ಆಪ್ ಗುಂಪಿಗೆ ಸೇರಿಸಿ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆರೋಪಿಗಳ ಸೂಚನೆಯಂತೆ ಮಂಜುನಾಥ್ ಹಂತ ಹಂತವಾಗಿ ₹21.12 ಲಕ್ಷವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಕೇವಲ ₹75 ಸಾವಿರ ಮಾತ್ರ ಮರಳಿದೆ. ಬಳಿಕ ಟ್ರೇಡಿಂಗ್ ಆ್ಯಪ್ ಕಾರ್ಯನಿರ್ವಹಿಸದೇ ಇದ್ದಾಗ ಮೋಸವಾಗಿರುವುದು ತಿಳಿದು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಅಶೋಕನಗರದ ಎ.ಸಿ. ಮಂಗಳಾ ಅವರಿಗೆ ಇ-ಕೆವೈಸಿ ಹೆಸರಿನಲ್ಲಿ ಕರೆ ಮಾಡಿ ಒಟಿಪಿ ಪಡೆದು ₹77,309 ವಂಚಿಸಲಾಗಿದೆ. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

