Breaking News

ಬೆಂಗಳೂರಲ್ಲಿ ನಕಲಿ ಚಿನ್ನ ಅಡವಿಟ್ಟು, ಬ್ಯಾಂಕ್ ಸಿಬ್ಬಂದಿಯಿಂದಲೇ 1.50ಕೋಟಿ ವಂಚನೆ!

ಬೆಂಗಳೂರಿನ ಪೀಣ್ಯ ವ್ಯಾಪ್ತಿಯ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ಉದ್ಯೋಗಿಯೊಬ್ಬ ನಕಲಿ ಚಿನ್ನ ಅಡವಿಟ್ಟು ₹1.53 ಕೋಟಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಗೋಲ್ಡ್ ಲೋನ್ ಅನುಮೋದನೆ ಮತ್ತು ಚಿನ್ನ ಪರಿಶೀಲನೆ ಜವಾಬ್ದಾರಿ ಹೊಂದಿದ್ದ ನಾಗೇಶ್, ಅಸಲಿ ಚಿನ್ನದ ಕೊಂಡಿಗಳನ್ನು ಬದಲಿಸಿ ಉಳಿದ ಭಾಗಕ್ಕೆ ನಕಲಿ ಚಿನ್ನ ಜೋಡಿಸಿ ಸ್ನೇಹಿತರ ಹೆಸರಿನಲ್ಲಿ 15 ಖಾತೆಗಳ ಮೂಲಕ ಸಾಲ ಮಂಜೂರು ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಆಡಿಟ್ ವೇಳೆ ವಂಚನೆ ಬಯಲಾಗಿದ್ದು, ಬಳಿಕ ಹಣ ಹೊಂದಿಸಲು ನಾಗೇಶ್ ಮತ್ತೊಂದು ಯೋಜನೆ ರೂಪಿಸಿದ್ದಾನೆ ಎನ್ನಲಾಗಿದೆ. ಕಡಿಮೆ ಬೆಲೆಗೆ ಚಿನ್ನ ಹರಾಜಿಗೆ ಬಂದಿದೆ ಎಂದು ಉದ್ಯಮಿ ಜಗದೀಶ್ ಅವರನ್ನು ನಂಬಿಸಿ ₹1.53 ಕೋಟಿ ಹಣ ಪಡೆದಿದ್ದು, ಆ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ಸಂಬಂಧ ಉದ್ಯಮಿ ಜಗದೀಶ್ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *