Breaking News

ಊರು, ಊಟದ ವಿಚಾರಕ್ಕೆ ಪತ್ನಿ ಕೊಲೆ: 7 ದಿನಗಳ ಕಾರ್ಯಾಚರಣೆ ನಂತರ ಬಿಹಾರ-ನೇಪಾಳ ಗಡಿಯಲ್ಲಿ ಹಂತಕ ಬಂಧನ, ಹೇಗಿತ್ತು ಗೊತ್ತಾ? ರೋಚಕ ಬೇಟೆ

ಬೆಂಗಳೂರು: ಗೇರುಪಾಳ್ಯದ ಬಾಡಿಗೆ ಮನೆಯಲ್ಲಿ ಬಿಹಾರ ಮೂಲದ ರೀಮಾ ಕುಮಾರಿ (24) ಹತ್ಯೆ ಪ್ರಕರಣದ ಆರೋಪಿ ಪತಿ ಧೀರಜ್ ಕುಮಾರ್‌ನನ್ನು ಕುಂಬಳಗೋಡು ಪೊಲೀಸರು ನೇಪಾಳ-ಬಿಹಾರ ಗಡಿ ಭಾಗದಲ್ಲಿ 7 ದಿನಗಳ ಕಾರ್ಯಾಚರಣೆ ಬಳಿಕ ಬಂಧಿಸಿದ್ದಾರೆ. ಜುಲೈ 29ರಂದು ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ, ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟಿದ್ದ ರೀಮಾ ಮೃತದೇಹ ಪತ್ತೆಯಾಗಿತ್ತು. ಬಳಿಕ ಆರೋಪಿ ಪತಿ ಪರಾರಿಯಾಗಿದ್ದ. ವಿಚಾರಣೆ ವೇಳೆ ಅಡುಗೆ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಗಳ ನಡೆದು, ಕೋಪದಲ್ಲಿ ದುಪಟ್ಟಾದಿಂದ ಕುತ್ತಿಗೆ ಹಿಸುಕಿ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತನನ್ನು ಬೆಂಗಳೂರಿಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *