Breaking News

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು : ಡಿ.ಕೆ.ಶಿವಕುಮಾರ್‌


ತುರುವೇಕೆರೆ(ತುಮಕೂರು) : ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ. ಮುಂಬರುವ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್‌ನ ಮುಖ್ಯಮಂತ್ರಿಗಳು ಇರಬೇಕು. ರಾಜ್ಯದ ಜನತೆಯ ಕಣ್ಣೀರು ಒರೆಸಬೇಕು ಅಷ್ಟೆಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ತುರುವೇಕೆರೆಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆಯ ಪೂರ್ವ ಸಿದ್ಧತಾ ಸಭೆ ಉದ್ದೇಶಿಸಿ ಗುರುವಾರ ಮಾತನಾಡಿ, ಪಕ್ಷಕ್ಕೆ ಯಾರೂ ಮುಖ್ಯವಲ್ಲ. ಪಕ್ಷ ಇದ್ದರೆ ಎಲ್ಲರೂ ಇದ್ದಂತೆ. ಮೊದಲು ಪಕ್ಷ ಸಂಘಟನೆ ಮಾಡಬೇಕು. ಆ ನಂತರ ಅಧಿಕಾರ ಎಂಬುದು ತಾನಾಗಿಯೇ ನಮ್ಮ ಬಳಿ ಬರುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ತಮಗೆ ಆಗಿದ್ದ ಅವಮಾನ, ನೋವುಗಳನ್ನು ಡಿ.ಕೆ.ಶಿವಕುಮಾರ್‌ ಬಿಡಿಸಿಟ್ಟರು.ಮಂತ್ರಿಯಾಗಿದ್ದರೂ ಟಿಕೆಟ್‌ ನೀಡದಿದ್ದದ್ದು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ವಿಳಂಬವಾಗಿ ಸಚಿವ ಸ್ಥಾನ ನೀಡಿದ್ದು, ಈ ಎಲ್ಲವನ್ನೂ ಕಾರ್ಯಕರ್ತರೆದುರು ಡಿ.ಕೆ.ಶಿವಕುಮಾರ್‌ ತೆರೆದಿಟ್ಟರು.

ನಾನು ಅಂದು ತಾಳ್ಮೆ ಕಳೆದುಕೊಂಡು ಪಕ್ಷದಿಂದ ದೂರವಾಗಿದ್ದರೆ, ಇಂದು ಈ ಹಂತಕ್ಕೆ ಬರುತ್ತಿರಲಿಲ್ಲ. ನಾನು ಪಕ್ಷಕ್ಕೆ ದುಡಿದದ್ದನ್ನು ಗಮನಿಸಿಯೇ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಈಗ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರು ಎಂದರು.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *