Breaking News

ವಿದೇಶಿಗನ ಜೊತೆ ಸಂಪರ್ಕ, ಭಾರತದಲ್ಲಿ ಗಲಭೆಗೆ ಸಂಚು ಆರೋಪ: ರಾಯಚೂರಿನಲ್ಲಿ ಟೀ ಸ್ಟಾಲ್ ಮಾಲೀಕ ಅರೆಸ್ಟ್

ರಾಯಚೂರಿನಲ್ಲಿ ಭಾರತದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 24 ವರ್ಷದ ಮೊಹಮ್ಮದ್ ಶಾಹಿಲ್‌ನನ್ನು ಸದರ್‌ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ‘ರಾಣಾ ಭಾಯ್’ ಎಂಬ ಹೆಸರಿನ ಖಾತೆ ನಡೆಸುತ್ತಿದ್ದ ಅರಬ್ ಮೂಲದ ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಶಾಹಿಲ್, ಆತನ ಪ್ರಚೋದನೆಗೆ ಒಳಗಾಗಿದ್ದ ಎನ್ನಲಾಗಿದೆ. ತನಿಖೆ ವೇಳೆ ಶಾಹಿಲ್ ವಿದೇಶಿ ವ್ಯಕ್ತಿಯ ಪೋಸ್ಟ್‌ಗಳಿಗೆ ಲೈಕ್, ಕಾಮೆಂಟ್ ಹಾಗೂ ಶೇರ್ ಮಾಡುತ್ತಿದ್ದ ಮಾಹಿತಿ ಸಿಕ್ಕಿದೆ. ಬಳಿಕ ನೇರವಾಗಿ ಸಂದೇಶ ಕಳುಹಿಸಿ ಪಿಸ್ತೂಲ್ ಕೇಳಿದ್ದ ಎನ್ನಲಾಗಿದ್ದು, ಜುಲೈ 14ರಿಂದ ಇಬ್ಬರ ನಡುವೆ ವಾಟ್ಸಾಪ್ ಮೂಲಕ ನಿರಂತರ ಸಂಪರ್ಕ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭಾರತದಲ್ಲಿ ಗಲಭೆ ಸೃಷ್ಟಿಸುವಂತೆ ವಿದೇಶಿ ವ್ಯಕ್ತಿ ಶಾಹಿಲ್‌ಗೆ ಪ್ರಚೋದನೆ ನೀಡಿದ್ದಲ್ಲದೆ, ಹಣ ಹಾಗೂ ಪಿಸ್ತೂಲ್ ಒದಗಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಈ ಸಂಚಿನ ಹಿಂದೆ ಇನ್ನಷ್ಟು ವ್ಯಕ್ತಿಗಳ ಕೈವಾಡವಿದೆಯೇ ಹಾಗೂ ಶಾಹಿಲ್ ಯಾವುದೇ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದನಾ ಎಂಬ ಬಗ್ಗೆ ಸದರ್‌ಬಜಾರ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *