Breaking News

ಕಳ್ಳತನ ನಡೆಸಿ ಜೀವಬೆದರಿಕೆಯೊಡ್ಡಿದ್ದ ಆರೋಪಿ 24 ಗಂಟೆಯೊಳಗೆ ಬಂಧನ

ಹೊನ್ನಾವರದಲ್ಲಿ ಅರ್ಬನ್ ಬ್ಯಾಂಕ್‌ನಿಂದ ಹಣ ಪಡೆದು ಹೊರಬರುತ್ತಿದ್ದ ವ್ಯಕ್ತಿಯನ್ನು ಬೈಕ್‌ನಲ್ಲಿ ಕರೆದೊಯ್ದು ಬೆದರಿಸಿ ಹಣ ಕಸಿದುಕೊಂಡಿದ್ದ ಆರೋಪಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ವಂದೂರು ಗ್ರಾಮದ ಶಂಕರ ವಿಠೋಬ ನಾಯ್ಕ ಅವರು ಬಂಗಾರದ ಚೈನ್ ಅಡವಿಟ್ಟು ₹1.50 ಲಕ್ಷ ಪಡೆದಿದ್ದರು. ಬ್ಯಾಂಕ್‌ನಿಂದ ಹೊರಬರುತ್ತಿದ್ದ ಶಂಕರ ಅವರನ್ನು ಬೈಕ್‌ನಲ್ಲಿ ಕರೆದೊಯ್ದ ಆರೋಪಿ, ಮಾರ್ಗಮಧ್ಯೆ ಹಣ ನೀಡದಿದ್ದರೆ ಕೆಳಗೆ ಬೀಳಿಸಿ ಕೊಲ್ಲುವುದಾಗಿ ಬೆದರಿಸಿ ಜೇಬಿನಲ್ಲಿದ್ದ ₹3,500 ಕಸಿದುಕೊಂಡಿದ್ದಾನೆ. ಈ ಕುರಿತು ಶಂಕರ ಅವರು ಹೊನ್ನಾವರ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಮಂಕಿಯ ನಾಗರಾಜ ಶಂಕರ ನಾಯ್ಕನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಕಸಿದುಕೊಂಡ ಹಣವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *