Breaking News

ಉದ್ದಿನ ವಡೆಯಲ್ಲಿ ಹಲ್ಲಿ ಪತ್ತೆ : ಪ್ರಶ್ನಿಸಿದಕ್ಕೆ, ಹಣ ಕೊಡ್ಬೇಡಿ ಹೋಗ್ತಾ ಇರಿ ಎಂದು ಅವಾಜ್ ಹಾಕಿದ ಹೋಟೆಲ್ ಮಾಲೀಕ!

ಚಿಕ್ಕಮಗಳೂರಿನ ಹೊರನಾಡಿನ ಖಾಸಗಿ ಹೋಟೆಲ್‌ನಲ್ಲಿ ಪ್ರವಾಸಿಗರಿಗೆ ನೀಡಿದ್ದ ಉದ್ದಿನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಬೆಂಗಳೂರಿನಿಂದ ಬಂದ ಆರು ಮಂದಿ ಪ್ರವಾಸಿಗರು ಹಾಗೂ ಮಕ್ಕಳು ವಡೆ ಸೇವಿಸಿದ ಬಳಿಕ ಅದರಲ್ಲಿ ಹಲ್ಲಿ ಇರುವುದು ಪತ್ತೆಯಾಗಿದೆ. ವಿಷಯ ತಿಳಿಸಿದರೂ ಹೋಟೆಲ್ ಮಾಲೀಕ ಸರಿಯಾಗಿ ಸ್ಪಂದಿಸದೆ ಪ್ರವಾಸಿಗರೊಂದಿಗೆ ಜಗಳಕ್ಕಿಳಿದಿದ್ದಾನೆ. ಇದರಿಂದ ಪ್ರವಾಸಿಗರು 112ಕ್ಕೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಕಳಸ ಪೊಲೀಸರು ಮಕ್ಕಳು ಸೇರಿದಂತೆ ಆರೂ ಜನರನ್ನು ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಮಾಡಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಬಳಿಕ ಪ್ರವಾಸಿಗರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

Share News

About BigTv News

Check Also

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಬೆಂಗಳೂರು: ಸಿಸಿಬಿ ಹಾಗೂ ಉಪ್ಪಾರಪೇಟೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಜಪ್ತಿ …

Leave a Reply

Your email address will not be published. Required fields are marked *