Breaking News

ಪ್ರೀತಿ, ಮದುವೆ, ಮೋಸ – ಪತಿಯ ಮನೆ ಮುಂದೆ ಪತ್ನಿಯ ಅಹೋರಾತ್ರಿ ಧರಣಿ!

ರಾಯಚೂರು: ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಾದ ಬಳಿಕ ಪತಿ ತಮ್ಮನ್ನು ಹಾಗೂ ಮಕ್ಕಳನ್ನು ದೂರ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಘಟನೆ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ. ಅಮೃತಾ ಹಾಗೂ ದರ್ಶನ್ ಮೆಹ್ತಾ ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜಾತಿ ವಿಚಾರ ಮುಂದಿಟ್ಟು ಪತಿಯ ಕುಟುಂಬದವರು ತಮ್ಮನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಅಮೃತಾ ಆರೋಪಿಸಿದ್ದಾರೆ. ಅಲ್ಲದೆ, ದರ್ಶನ್‌ಗೆ ಮತ್ತೊಂದು ಮದುವೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಇಬ್ಬರು ಮಕ್ಕಳೊಂದಿಗೆ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಪತಿ ತನ್ನ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ವಿಚ್ಛೇದನ ನೀಡದಿದ್ದರೆ ಅವುಗಳನ್ನು ತಂದೆ ಹಾಗೂ ಸಹೋದರರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಮೃತಾ ಆರೋಪಿಸಿದ್ದಾರೆ. ದರ್ಶನ್‌ಗೆ ಬೇರೆ ಯುವತಿಯರೊಂದಿಗೂ ಸಂಬಂಧವಿದ್ದು, ಮತ್ತೊಂದು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಸದ್ಯ ಮಹಿಳೆ ಮಕ್ಕಳೊಂದಿಗೆ ಧರಣಿ ಮುಂದುವರಿಸಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *