Breaking News

ನಾಲ್ವರು ನಾಪತ್ತೆ ಕೇಸ್​ಗೆ ತಿರುವು: ಕೋಟ್ಯಂತರ ರೂ ವಂಚಿಸಿ ನಾಪತ್ತೆಯಾಗಿರುವ ಸ್ನೇಹಿತನ ಹಾದಿ ಹಿಡಿದ್ರಾ ದಂಪತಿ?

ದಾವಣಗೆರೆ: ನಗರದ ಬನಶಂಕರಿ ಬಡಾವಣೆಯ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ರಮೇಶಕುಮಾರ್–ಜಯಶೀಲಾ ದಂಪತಿ ಇಬ್ಬರು ಮಕ್ಕಳೊಂದಿಗೆ ಆ.14ರಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದು, ಕೋಟ್ಯಂತರ ರೂ. ಹಣದ ಅವ್ಯವಹಾರದ ಹಿನ್ನೆಲೆಯಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ರಮೇಶಕುಮಾರ್ ಅವರ ಸ್ನೇಹಿತ ರಮೇಶ್ ‘ಈಶ್ವರಿ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಹೂಡಿಕೆದಾರರಿಗೆ ಶೇ.4ರಿಂದ 6ರಷ್ಟು ಲಾಭ ನೀಡುವುದಾಗಿ ನಂಬಿಸಿ 100ಕ್ಕೂ ಹೆಚ್ಚು ಜನರಿಂದ ₹7.27 ಕೋಟಿ ಸಂಗ್ರಹಿಸಿ 2023ರಲ್ಲಿ ನಾಪತ್ತೆಯಾಗಿದ್ದ. ಈ ಪ್ರಕರಣದಲ್ಲಿ ರಮೇಶಕುಮಾರ್ ಕೂಡ ದೂರು ದಾಖಲಿಸಿದ್ದರು. ಇದೀಗ ರಮೇಶಕುಮಾರ್ ಕುಟುಂಬ ಸಮೇತ ನಾಪತ್ತೆಯಾಗಿರುವುದರಿಂದ ಹಳೆಯ ವಂಚನೆ ಜಾಲಕ್ಕೂ ಈ ಪ್ರಕರಣಕ್ಕೂ ನಂಟಿದೆಯೇ ಎಂಬ ಅನುಮಾನ ಮೂಡಿದೆ. ಇಬ್ಬರು ಸ್ನೇಹಿತರು ಸೇರಿ ಪೂರ್ವಯೋಜಿತವಾಗಿ ನಾಪತ್ತೆಯಾಗಿದ್ದಾರೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು, ಕುಟುಂಬದ ಪತ್ತೆಗೆ ಶೋಧ ಮುಂದುವರಿದಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *