ಕೋಲಾರ: ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ತನ್ನದೇ ಸಾವಿನ ನಾಟಕವಾಡಿ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅರುಣ್ ಕುಮಾರ್ ರೆಡ್ಡಿಯನ್ನು ಕ್ಯಾಸಂಬಳ್ಳಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. 2015ರಲ್ಲಿ ಕ್ಯಾಸಂಬಳ್ಳಿ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವವನ್ನು ತನ್ನದೇ ಶವವೆಂದು ನಂಬಿಸುವಂತೆ ಮಾಡಿ ಆತ ಪರಾರಿಯಾಗಿದ್ದ. ಸಾಲಗಾರರಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ವಿಮೆ ಹಣ ಪಡೆಯುವ ಉದ್ದೇಶದಿಂದ ಸ್ಮಶಾನದಿಂದ ಮತ್ತೊಂದು ಮೃತದೇಹ ತಂದು ಸುಟ್ಟು, ತನ್ನ ಬೈಕ್ ಹಾಗೂ ಗುರುತಿನ ಚೀಟಿ ಸ್ಥಳದಲ್ಲಿಟ್ಟು ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶವ ಅರುಣ್‌ನದ್ದಲ್ಲ ಎಂಬುದು ದೃಢಪಟ್ಟ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. 11 ವರ್ಷಗಳ ಬಳಿಕ ಅರುಣ್ ಹೆಸರಿನಲ್ಲಿದ್ದ ಮತ್ತೊಂದು ಸಿಮ್‌ಕಾರ್ಡ್‌ನ ಕರೆ ವಿವರ ದಾಖಲೆ (CDR) ಆಧರಿಸಿ ಪೊಲೀಸರು ಆತನ ಚಲನವಲನ ಪತ್ತೆಹಚ್ಚಿದ್ದಾರೆ. ಬಳಿಕ ಚೆನ್ನೈನಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಸಾಲದ ಕಾಟ ತಪ್ಪಿಸಿಕೊಳ್ಳಲು ಸಾವಿನ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

