ರಾಯಚೂರು ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಯುವತಿಯನ್ನು ಅತ್ಯಾಚಾರವೆಸಗಿ ಬಾವಿಗೆ ಎಸೆದ ದುರ್ಘಟನೆ ಜರುಗಿದೆ. ಹೊಕ್ರಾಣಿ ಗ್ರಾಮದ ಯುವತಿಯನ್ನು ಬುಧವಾರ ಸಂಜೆ ಬಹಿರ್ದೆಸೆಗೆ ತೆರಳಿದ ವೇಳೆ ಕಿಡಿಗೇಡಿಗಳು ಆಕೆಯನ್ನು ಹಿಂಬಾಲಿಸಿ ಅತ್ಯಾಚಾರ ಎಸಗಿದ್ದಾರೆ. ನಂತರ ಹತ್ಯೆಗೈದು ವಿವಸ್ತ್ರಗೊಳಿಸಿ ಶವವನ್ನು ಬಾವಿಯಲ್ಲಿ ಎಸೆದಿದ್ದಾರೆ. ಕುಟುಂಬಸ್ಥರು ಹುಡುಕಾಡಿದರೂ ಸಿಕ್ಕಿರಲಿಲ್ಲ.ಗುರುವಾರ ಆಕೆಯ ಶವ ಬಾವಿಯಲ್ಲಿ ಪತ್ತೆಯಾಗಿದೆ. ಪ್ರಕರಣ ಸಂಬಂಧ ಅದೇ ಗ್ರಾಮದ ಮಹಾಂತೇಶ, ವೀರೇಶ, ಗುಂಡ್ಯ, ಬಸವರಾಜ ಎಂಬುವವರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

