Breaking News

ಜಮೀನಿಗೆ ನೀರು ಬಿಡುವ ವಿಚಾರಕ್ಕೆ ಗಲಾಟೆ, ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಹತ್ಯೆಗೈದ ತಂದೆ, ಮಗ!

ಜಮೀನಿಗೆ ನೀರು ಬಿಡುವ ವಿಚಾರವಾಗಿ ಗಲಾಟೆ ನಡೆದಿದೆ ಈ ವೇಳೆ ಗಲಾಟೆಯಲ್ಲಿ ಅಪ್ಪ-ಮಗ ಸೇರಿ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಗಟಗೆರೆ ಗ್ರಾಮದ ವಡ್ಡರ ಬಂಡೆಯಲ್ಲಿ ಗುರುವಾರ ನಡೆದಿದೆ.ಕೊಲೆ ಆರೋಪಿಗಳಾದ ಮೃತನ ಚಿಕ್ಕಪ್ಪ ಗಂಗಾಧರಪ್ಪ ಹಾಗೂ ಆತನ ಪುತ್ರ ಸೋಮೇಶ್​ ಎಂಬಾತನನ್ನು ಬಂಧಿಸಲಾಗಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆ ಪಿಎಸ್‌ಐ ರಮೇಶ್ ಗುಗ್ಗರಿ ಹಾಗೂ ಪಿಎಸ್‌ಐ ಲಲಿತಮ್ಮ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *