ISIS ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೈಯದ್ ಫಸಿಯುರ್ ರೆಹಮಾನ್‌ಗೆ ಬೆಂಗಳೂರಿನ NIA ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ₹48 ಸಾವಿರ ದಂಡ ವಿಧಿಸಿದೆ. 2020ರ ಜನವರಿ 10ರಂದು ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ಬಳಿಕ NIA ತನಿಖೆ ಕೈಗೆತ್ತಿಕೊಂಡಿತ್ತು. ‘ಅಲ್-ಹಿಂದ್ ISIS’ ಸಂಚಿಗೆ ಸಂಬಂಧಿಸಿದಂತೆ ಒಟ್ಟು 20 ಆರೋಪಿಗಳ ವಿರುದ್ಧ 3 ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಗುರುಪ್ಪನಪಾಳ್ಯದಲ್ಲಿ ನಡೆದ ಸಭೆಗಳಲ್ಲಿ ದೇಶವಿರೋಧಿ ಚಟುವಟಿಕೆ, ಕೋಮು ಗಲಭೆ ಹಾಗೂ ‘ಟಾರ್ಗೆಟ್ ಕಿಲ್ಲಿಂಗ್ಸ್’ ಕುರಿತು ಸಂಚು ರೂಪಿಸಲಾಗಿತ್ತು. ರೆಹಮಾನ್ ಅಲ್-ಹಿಂದ್ ಸದಸ್ಯರಿಗೆ ಕಾಡಿನಲ್ಲಿ ತರಬೇತಿ ನೀಡಲು ನೆರವಾಗಿದ್ದು, ಟೆಂಟ್ ಹಾಗೂ ಚಾಕುಗಳನ್ನು ಖರೀದಿಸಿ ನೀಡಿದ್ದನು ಎಂದು ತನಿಖೆಯಲ್ಲಿ ದೃಢಪಟ್ಟಿದೆ. ಭಾರತದಲ್ಲಿ ISIS ಪ್ರಾಂತ್ಯ ಸ್ಥಾಪಿಸುವುದು ಗುಂಪಿನ ಉದ್ದೇಶವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

