ವಿಜಯಪುರದಿಂದ ಇಂಡಿ ಮಾರ್ಗವಾಗಿ ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಗೋಮಾಂಸವನ್ನು ಭಜರಂಗದಳ ಕಾರ್ಯಕರ್ತರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ತಡೆದಿದ್ದಾರೆ. ಹಲವು ಕಿಲೋಮೀಟರ್‌ಗಳವರೆಗೆ ಬೈಕ್‌ನಲ್ಲಿ ಲಾರಿಯನ್ನು ಚೇಸ್ ಮಾಡಿ ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಾರಿ ಪರಿಶೀಲಿಸಿದಾಗ ಕಂಟೇನರ್‌ನಲ್ಲಿ ಅಂದಾಜು 8 ಟನ್‌ಗೂ ಹೆಚ್ಚು ಮಾಂಸ ಪತ್ತೆಯಾಗಿದೆ. ಈ ಬಗ್ಗೆ ಇಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಂಸದ ಮಾದರಿಯನ್ನು FSL ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ವಿಜಯಪುರದ ಜೈಲ್ ರಸ್ತೆ ನಿವಾಸಿ ಖಾಸಿಂಸಾಬ್ ಮುಲ್ಲಾ ಮಾಂಸ ಸರಬರಾಜು ಮಾಡುತ್ತಿದ್ದರೆ, ತೆಲಂಗಾಣದ ನಾಂಪಲ್ಲಿ ನಿವಾಸಿ ಇಮ್ರಾನ್ ಶೇಖ್ಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

