ರಾಮನಗರದ ಶಾಂತಿಲಾಲ್ ಲೇಔಟ್‌ನ ನಿರ್ಮಾಣ ಹಂತದ ಮನೆಯೊಂದರಲ್ಲಿ ನಡೆಯುತ್ತಿದ್ದ ಖೋಟಾ ನೋಟು ತಯಾರಿಕೆಯ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ದಾಳಿ ವೇಳೆ ₹5 ಲಕ್ಷ ಮೌಲ್ಯದ ನಕಲಿ ನೋಟು ತಯಾರಿಕೆಗೆ ಸಿದ್ಧಪಡಿಸಿದ್ದ 10 ಪೇಪರ್ ಬಂಡಲ್‌ಗಳು, ಕೆಮಿಕಲ್, ಗ್ಲಾಸ್ ಫಿಲ್ಮ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಜಪ್ತಿ ಮಾಡಿ 7 ಮಂದಿಯನ್ನು ಬಂಧಿಸಿದ್ದಾರೆ. ಮನೆ ಮಾಲೀಕ ಸಂತೋಷ್‌ಗೆ ಕಮಿಷನ್ ನೀಡುವ ಆಮಿಷವೊಡ್ಡಿ ಆರೋಪಿ ಸಂಪತ್ ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ನಿರ್ಮಾಣ ಕಾಮಗಾರಿಗೆ ಬೇಕಾದ ಸಾಮಗ್ರಿ ಖರೀದಿ ಹಾಗೂ ಕಾರ್ಮಿಕರಿಗೆ ಹಣ ಪಾವತಿಸಲು ಖೋಟಾ ನೋಟುಗಳನ್ನು ಬಳಸುವ ಯೋಜನೆ ರೂಪಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಂತೋಷ್, ಸಂಪತ್, ಗೋವಿಂದರಾಜು, ರೇಣುಕಾರಾಜ್, ರಾಜೇಶ್, ಶಿವರಾಜ್ ಹಾಗೂ ಸತೀಶ್ ಬಂಧಿತರು. ಸ್ಥಳದಲ್ಲಿ ಕೇವಲ ಕಚ್ಚಾ ಪೇಪರ್ ಸಿದ್ಧಪಡಿಸಿ, ಬಳಿಕ ಬೇರೆಡೆ ಅಂತಿಮ ರೂಪ ನೀಡುವ ವ್ಯವಸ್ಥೆ ಇತ್ತು ಎನ್ನಲಾಗಿದ್ದು, ಇದರ ಹಿಂದೆ ಅಂತಾರಾಜ್ಯ ಜಾಲವಿರುವ ಶಂಕೆಯ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಪ್ರಕರಣ ಐಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

