ಚಿತ್ರದುರ್ಗ ; ಮೃತ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಮನೆಯಲ್ಲಿ ವಿವಿಧೆಡೆ ಇರಿಸಿದ್ದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಹೊಳಲ್ಕೆರೆಯಲ್ಲಿ ವಾರದ ಹಿಂದೆ ಗಂಗಾಧರ ಶಾಸ್ತ್ರಿ(70) ಎಂಬುವವರು ಮೃತಪಟ್ಟಿದ್ರು. ಒಂಟಿಯಾಗಿ ಬದುಕು ಸವೆಸಿದ್ದ ಗಂಗಾಧರ ಶಾಸ್ತ್ರಿ ಅವರು, ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಶಾಸ್ತ್ರಿ ಹೆಸರಲ್ಲಿ 16 ಎಕರೆ ಜಮೀನಿದ್ದು, 4ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಸದ್ಯ ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ಹಣ ಇದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. 2 ದಿನ ಹಿಂದೆ ಭಕ್ತರು ಶಾಸ್ತ್ರಿ ಮನೆ ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರು ನಿರ್ಧರಿಸಿದ್ದಾರೆ. ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರ ನಿರ್ಧಾರವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





