ಧಾರವಾಡ ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಪದಾಧಿಕಾರಿಗಳು ಮತ್ತು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇಂದು (ಜೂ.24) ಬೆಳಿಗ್ಗೆ ಕೇದಾರ ಪೀಠದ 1008 ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದಂಗಳವರನ್ನು ಹರಿಹರ ತಾಲೂಕಿನ ಶಿವನಹಳ್ಳಿಯಲ್ಲಿರುವ ವೈರಾಗ್ಯಧಾಮದಲ್ಲಿ ಭೇಟಿ ಮಾಡಿ, ದರ್ಶನ ಪಡೆದು ನಂತರ ಆಶಿರ್ವಾದ ಪಡೆದರು
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಕಣ್ವಕುಪ್ಪೆ ಗವಿಮಠದ ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಧಾರವಾಡ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್.ಮುಗನೂರಮಠ, ಹಿರಿಯ ವಕೀಲರಾದ ಎಸ್.ಎಸ್.ಬೆತೂರಮಠ ಮತ್ತು ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಡಾ.ಸುರೇಶ ಹಿರೇಮಠ, ಪಂಚಾಕ್ಷರಯ್ಯ ಹಿರೇಮಠ, ಪ್ರೊ.ಜಗದೀಶ ಕಾಡದೇವರಮಠ, ಸುಮಿತಾ ಹಿರೇಮಠ, ಶಿವಲಿಂಗಯ್ಯ ಹಿರೇಹಾಳ, ಪತ್ರಕರ್ತ ಸಂಜೀವಕುಮಾರ ಎಸ್.ಕೆ. ಸೇರಿದಂತೆ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





