ರೌಡಿಗಳಿಂದ ಅಂತರ..! ಡ್ರಗ್ಸ್ ಪೆಡ್ಲರ್‌ಗಳಿಗೆ ನೋ ಎಂಟ್ರಿ — ಕ್ರಿಮಿನಲ್‌ಗಳಿಂದ ಖಾಕಿ ದೂರವಿದ್ದರೆ ಪೊಲೀಸ್ ಇಲಾಖೆ ಇನ್ನಷ್ಟು ಕ್ಲೀನ್..!
ಖಾಕಿ ಕ್ಲೀನ್.. ಕಮಿಷನರ್ ಖಡಕ್..! ಬೋರಸೆ ಸಾಹೇಬರ ಹೆಸರಲ್ಲಿ ಯಾರಿಗೂ ‘ಪವರ್’ ಆಟ ಬೇಡ — ಕ್ರಿಮಿನಲ್‌ಗಳಿಗೆ ನೋ ಎಂಟ್ರಿ..
ಕಮಿಷನರ್ ಖದರ್ ಶುರು..! ಸಾಹೇಬರೇ ಫುಲ್ ಅಲರ್ಟ್..!
ಹುಬ್ಬಳ್ಳಿ-ಧಾರವಾಡ: ಹೊಸ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಎಂಟ್ರಿಯಾಗುತ್ತಿದ್ದಂತೆ ಖಾಕಿ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ..!
ಅಧಿಕಾರ ಸ್ವೀಕರಿಸಿದ ದಿನದಿಂದಲೇ ಡ್ರಗ್ಸ್, ಅಪರಾಧ ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ಖಡಕ್ ಸಂದೇಶ ನೀಡಿರುವ ಕಮಿಷನರ್ ಸಾಹೇಬರ ಕಾರ್ಯವೈಖರಿ ಇದೀಗ ಗಮನ ಸೆಳೆಯುತ್ತಿದೆ.ಆದರೆ ಇದೇ ಸಂದರ್ಭದಲ್ಲಿ ಕಮಿಷನರ್ ಕಚೇರಿಯಲ್ಲಿ ನಡೆದಿರುವ ಕೆಲವು ಭೇಟಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.ಇಲ್ಲಿ ಪ್ರಶ್ನೆ ಕಮಿಷನರ್ ಸಾಹೇಬರದ್ದಲ್ಲ…

ಪ್ರಶ್ನೆ ಅವರ ಸುತ್ತಲಿನ ವ್ಯವಸ್ಥೆಯದ್ದು..! ಸಾಹೇಬರೇ… ನಿಮ್ಮ ಫೋಟೋ ಯಾರಿಗೂ ‘ಪವರ್ ಸರ್ಟಿಫಿಕೇಟ್’ ಆಗದಿರಲಿ..!
ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಕಮಿಷನರ್‌ರಿಗೆ ಪ್ರತಿಯೊಬ್ಬರ ಹಿನ್ನೆಲೆ ತಕ್ಷಣ ತಿಳಿದಿರಲು ಸಾಧ್ಯವಿಲ್ಲ….
ಆದರೆ ಯಾರನ್ನು ಒಳಗೆ ಬಿಡಬೇಕು, ಯಾರ ಹಿನ್ನೆಲೆ ಏನು, ಯಾರು ಯಾವ ಉದ್ದೇಶದಿಂದ ಬರುತ್ತಿದ್ದಾರೆ ಎನ್ನುವುದನ್ನು ಸಂಬಂಧಪಟ್ಟ ಸಿಬ್ಬಂದಿ ಗಮನಿಸುವುದು ಅತ್ಯಂತ ಮುಖ್ಯ….
ಯಾಕಂದ್ರೆ…
ಅಧಿಕಾರಿಯ ಜೊತೆ ಫೋಟೋ ತೆಗೆಸಿಕೊಳ್ಳುವುದು ಕೆಲವರಿಗೆ ಸುಲಭ…ಆ ಫೋಟೋವನ್ನು ತೋರಿಸಿ ಪ್ರಭಾವ ಬೀರುವುದು ಇನ್ನೂ ಸುಲಭ..!
ಇಂತಹ ಫೋಟೋಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರೆ, ಅದರ ಹೊರೆ ಮಾತ್ರ ಪೊಲೀಸ್ ಇಲಾಖೆಯ ಇಮೇಜ್ ಮೇಲೆ ಬೀಳುತ್ತದೆ….
ಕಮಿಷನರ್ ಸಾಹೇಬರೇ — ಫುಲ್ ಅಲರ್ಟ್..! ರೌಡಿ ಶೀಟರ್‌ಗಳು, ಕೊಲೆ ಪ್ರಕರಣಗಳ ಆರೋಪಿಗಳು, ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರು, ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಅಪರಾಧ ಹಿನ್ನೆಲೆಯ ವ್ಯಕ್ತಿಗಳಿಂದ ಪೊಲೀಸ್ ಇಲಾಖೆ ಅಂತರ ಕಾಯ್ದುಕೊಂಡರೆ — ಖಾಕಿಯ ಕೆಲಸ ಇನ್ನಷ್ಟು ಕ್ಲೀನ್ ಆಗುತ್ತದೆ..!
ಇದು ಯಾರನ್ನಾದರೂ ಗುರಿಯಾಗಿಸುವ ಮಾತಲ್ಲ… ಪೊಲೀಸ್ ಇಲಾಖೆಯ ಘನತೆ ಮತ್ತು ಕಮಿಷನರ್ ಹುದ್ದೆಯ ಗೌರವ ಕಾಪಾಡುವ ಎಚ್ಚರಿಕೆಯ ಮಾತು…
ಡ್ರಗ್ಸ್ ವಿರುದ್ಧ ನೀವು ತೆಗೆದುಕೊಂಡಿರುವ ಕಠಿಣ ನಿಲುವಿಗೆ ಜನರಿಂದ ಬೆಂಬಲ ಸಿಗುತ್ತಿದೆ…
ಅಂತಹ ಸಂದರ್ಭದಲ್ಲಿ ನಿಮ್ಮ ಹೆಸರನ್ನು, ನಿಮ್ಮ ಹುದ್ದೆಯನ್ನು ಅಥವಾ ನಿಮ್ಮ ಜೊತೆಗಿನ ಫೋಟೋವನ್ನು ಯಾರೂ ದುರುಪಯೋಗಪಡಿಸಿಕೊಳ್ಳದಂತೆ ಕಮಿಷನರೇಟ್ ಸಿಬ್ಬಂದಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕಿದೆ. ಕಮಿಷನರ್ ಸಾಹೇಬರೇ…
ನಿಮ್ಮ ವೇಗಕ್ಕೆ ಬ್ರೇಕ್ ಹಾಕಲು ಯಾರಿಗೂ ಅವಕಾಶ ಕೊಡಬೇಡಿ..!
ನಿಮ್ಮ ಹೆಸರಿಗೆ ಕಳಂಕ ತರಲು ಯಾರಿಗೂ ಜಾಗ ಕೊಡಬೇಡಿ..!
ನಿಮ್ಮ ಸುತ್ತಲೂ ಯಾರು ಬರುತ್ತಾರೆ ಅನ್ನೋದರ ಮೇಲೆ ಒಂದು ಕಣ್ಣು ಸದಾ ಇರಲಿ..! ಕಮಿಷನರ್ ಖದರ್ ಶುರುವಾಗಿದೆ… ಖಾಕಿಯ ಗೌರವಕ್ಕಾಗಿ ಸಾಹೇಬರು ಫುಲ್ ಅಲರ್ಟ್ ಆಗಿರಬೇಕು..!
bigtvnews | Hubli Dharwad News | Kannada News | Karnataka News Hubli News | News In Hubli | Local news

