ಗೋಕುಲ ರಸ್ತೆಯ ಹೋಟೆಲ್‌ಗಳಿಗೆ ಖಾಕಿ ಶಾಕ್..!
ವೀಕೆಂಡ್ ಪಾರ್ಟಿ ಹೆಸರಲ್ಲಿ ತಡರಾತ್ರಿ ಆಟ? — ದಿಢೀರ್ ದಾಳಿಗೆ ಕೆಲವರು ಎಸ್ಕೇಪ್,!
ನೂತನ ಕಮಿಷನರ್ ಎಫೆಕ್ಟ್..! ಹೋಟೆಲ್‌ಗಳ ಮೇಲೆ ಪೊಲೀಸರ ಖಡಕ್ ಆಪರೇಷನ್
ಐಸ್ ಕ್ಯೂಬ್, ಬಾಂಬೆ 63 ಮೇಲೆ ದಾಳಿ — ತಡರಾತ್ರಿ ಚಟುವಟಿಕೆಗಳಿಗೆ ಬ್ರೇಕ್?
ಹುಬ್ಬಳ್ಳಿ: ನೂತನ ಪೊಲೀಸ್ ಕಮಿಷನರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಹುಬ್ಬಳ್ಳಿ ಪೊಲೀಸರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ನಗರದ ಗೋಕುಲ ರಸ್ತೆಯ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ…
ವೀಕೆಂಡ್ ಪಾರ್ಟಿ ಹೆಸರಿನಲ್ಲಿ ತಡರಾತ್ರಿವರೆಗೂ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಡಿಸಿಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ…
ಐಸ್ ಕ್ಯೂಬ್ ಹಾಗೂ ಬಾಂಬೆ 63 ಹೋಟೆಲ್‌ಗಳಿಗೆ ಖಾಕಿ ಎಂಟ್ರಿ ಕೊಡುತ್ತಿದ್ದಂತೆ ಕೆಲವರು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ ಎನ್ನಲಾಗಿದೆ. ಇದರಿಂದ ಹೋಟೆಲ್ ವಲಯದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು…
ಇಷ್ಟು ದಿನ ತಡರಾತ್ರಿವರೆಗೂ ಸದ್ದು ಮಾಡುತ್ತಿದ್ದ ಹೋಟೆಲ್‌ಗಳಿಗೆ ಇದೀಗ ಪೊಲೀಸರ ದಿಢೀರ್ ದಾಳಿ ಶಾಕ್ ನೀಡಿದೆ…
ಹೋಟೆಲ್‌ಗಳ ಮೇಲೆ ನಡೆದಿರುವ ದಾಳಿಯ ಸಂಪೂರ್ಣ..
ನೂತನ ಕಮಿಷನರ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ನಡೆದಿರುವ ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರಿಯುತ್ತಾ? ತಡರಾತ್ರಿ ನಿಯಮ ಉಲ್ಲಂಘನೆಗೆ ಖಾಕಿ ಬ್ರೇಕ್ ಹಾಕುತ್ತಾ? ಎಂಬುದು ಕುತೂಹಲ ಮೂಡಿಸಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

