ಬಾಗಲಕೋಟೆಯ ಬಾಂಬೆ ಕಾಲೋನಿಯಲ್ಲಿ ಪ್ರಿಯಕರ ಕರೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದ 27 ವರ್ಷದ ಮೆಹಬೂಬ್ ಬಿ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಇಬ್ಬರು ಮಕ್ಕಳ ತಾಯಿ ಎನ್ನಲಾಗಿದೆ. ಕಿರಣ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದ ಮೆಹಬೂಬ್ ಹಲವು ಬಾರಿ ಕರೆ ಮಾಡಿದರೂ ಆತ ಸ್ವೀಕರಿಸಿರಲಿಲ್ಲ. ಬಳಿಕ ವಿಡಿಯೋ ಕರೆ ಮಾಡಿ, “ಫೋನ್ ಮಾಡದಿದ್ದರೆ ಸಾಯುತ್ತೇನೆ” ಎಂದು ಹೇಳಿದ್ದಲ್ಲದೆ, ಆತನ ಹೆಸರನ್ನು ಬರೆದು ಸಾಯುವುದಾಗಿ ಆಡಿಯೋ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. ನಂತರ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ನವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

