Breaking News

ಕುಷ್ಟಗಿ ಮಿನಿಬಸ್‌ ಅಪಘಾತದಲ್ಲಿ 19 ಮಕ್ಕಳು ಸೇರಿ 20 ಜನರಿಗೆ ಗಾಯ

ಕುಷ್ಟಗಿ: ತಾಲ್ಲೂಕಿನ ಮದಲಗಟ್ಟಿ ಬಳಿ ಮಿನಿಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ತಗ್ಗಿಗೆ ಉರುಳಿದೆ. ಅಪಘಾತದಲ್ಲಿ 19 ಮಕ್ಕಳು ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ. ಬೆಳಗಾವಿಯ ರಾಮದುರ್ಗದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 30 ಮಂದಿ ಇದ್ದರು. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಕೆಲ ಮಕ್ಕಳು ಹಾಗೂ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *