Breaking News

ಕಳ್ಳತನದ ಕುರಿತು ಎಚ್ಚರದಿಂದಿರಲು ಕೂಡ್ಲಿಗಿ ಪೋಲೀಸರಿಂದ ಗ್ರಾಮಸ್ಥರಿಗೆ ಸಲಹೆ

ಕೂಡ್ಲಿಗಿ: ಅಫರಾದ ಪ್ರಕರಣಗಳನ್ನು ನಿಯಂತ್ರಿಸುವ ಉದ್ಧೇಶದಿಂದ ಪೊಲೀಸ್ ಇಲಾಖೆ ಸಾರ್ವಜನಿಕರ ಗಮನಕ್ಕೆ ಕೆಲವೊಂದು ಪ್ರಮುಖ ಅಂಶಗಳನ್ನು ತಿಳಿಪಡಿಸಿದ್ದು ಅಂತೆಯೇ ಕೂಡ್ಲಿಗಿ ಪೊಲೀಸ್ ಠಾಣೆ ವತಿಯಿಂದ ತಾಲೂಕಿನ ಹಾಗೂ ಪಟ್ಟಣದ ನಾಗರೀಕರಿಗೆ ಹಾಗೂ ಸಾವ೯ಜನಿಕರಿಗೆ ಕೆಲವೊಂದು ಸಲಹೆ ಸೂಚನೆ ಹಾಗೂ ಅಗತ್ಯ ಸಹಕಾರ ಕೋರಿ ಪ್ರಕಟಣೆ ಯ ಮೂಲಕ ಪೊಲೀಸರು ಮನವಿ ಮಾಡಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಯಾರೇ ಕಂಬಳಿ, ಬೆಡ್ ಶೀಟ್,ಇತರೆ ಹೂದಿಕೆಗಳನ್ನು ಮಾರಲು ತಮ್ಮ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಂಡು ಕೊಂಡುಕೊಳ್ಳೋ ವ್ಯವಹಾರ ಮಾಡಬೇಕಿದೆ. ಏಕೆಂದರೆ ಮಾರುವೇಶದಲ್ಲಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು ಮಕ್ಕಳ ಕಳ್ಳತನಗಳನ್ನು, ಇರಾನಿ ಗ್ಯಾಂಗ್ ಎಂಬ ಹೆಸರಿನ ಹೂರ ರಾಜ್ಯಗಳಿಂದ ಬಂದ ಕಳ್ಳರು ಕಳ್ಳತನ, ದರೋಡೆ, ಸುಲಿಗೆ, ಅತ್ಯಾಚಾರ ಇತ್ಯಾದಿ ಮಾಡುತಿದ್ದು ಅವರ ಮೇಲೆ ನಿಗಾ ಇಡಲು ಮಾನ್ಯ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ.ಅದ್ದರಿಂದ ಈ ಮಾಹಿತಿಯನ್ನು ಆದಷ್ಟು ಎಲ್ಲಾ ಸಾರ್ವಜನಿಕರಿಗೆ ಹಂಚಿಕೊಳ್ಳುವುದು ಹೊರ ರಾಜ್ಯದ ಮಾರಾಟಗಾರರ ಬಗ್ಗೆ ಮಾಹಿತಿಯನ್ನು ಗ್ರಾಮಸ್ಥರು ನಿಮ್ಮ ನಿಮ್ಮ ಬೀಟ್ ಪೊಲೀಸ್ ರವರಿಗೆ ಅಥವಾ ಕೂಡ್ಲಿಗಿ ಪೊಲೀಸ್ ಠಾಣೆಗೆ ಖುದ್ದು ಸಂಪಕಿ೯ಸಿ ನೀಡುವುದರೊಂದಿಗೆ ಸಹಕರಿಸಬೇಕೆಂದು ಕೂಡ್ಲಿಗಿ ಪೊಲೀಸರು ಕೋರಿದ್ದಾರೆ

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *