Breaking News

ತುಮಕೂರು: ಬೆಟ್ಟದಲ್ಲಿ ಅಡಗಿ ಕುಳಿತಿದ್ದ ನಕಲಿ ನಕ್ಸಲ್ ವೆಂಕಟೇಶ್ ಕೊನೆಗೂ ಅರೆಸ್ಟ್!

ಪಾವಗಡದ ಕಡಮಲಕುಂಟೆ ಬೆಟ್ಟದಲ್ಲಿ ಕಳೆದೊಂದು ತಿಂಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ನಕಲಿ ನಕ್ಸಲ್ ಕನಿಕಲಬಂಡೆ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಚ್ಚಾ ಬಾಂಬ್ ಸ್ಫೋಟಕ್ಕೆ ಯತ್ನ ಹಾಗೂ ನಕ್ಸಲ್ ಪಾರ್ಟಿ ಹೆಸರಿನಲ್ಲಿ ಬೆದರಿಕೆ ಪತ್ರ ಸೇರಿದಂತೆ ಮೂರು ಪ್ರಕರಣಗಳಲ್ಲಿ ವೆಂಕಟೇಶ್‌ ವಾಂಟೆಡ್ ಆಗಿದ್ದ. ಆರೋಪಿಗಾಗಿ 250ಕ್ಕೂ ಹೆಚ್ಚು ಪೊಲೀಸರ ತಂಡ ಬೆಟ್ಟದಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿ, ನಿನ್ನೆ ರಾತ್ರಿ ಬಂಧಿಸಿದೆ. ಬಳಿಕ ವೈದ್ಯಕೀಯ ತಪಾಸಣೆ ನಡೆಸಿ ವಿಚಾರಣೆ ಆರಂಭಿಸಲಾಗಿದೆ. ವೆಂಕಟೇಶ್ ವಿರುದ್ಧ 2026ರಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ 2012ರಿಂದ 2019ರವರೆಗೆ ಕಳ್ಳತನ, ರಾಬರಿ ಸೇರಿದಂತೆ 10 ಪ್ರಕರಣಗಳು ದಾಖಲಾಗಿದ್ದವು. ನಕ್ಸಲ್ ಪಾರ್ಟಿ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪವೂ ಇದೆ. ಸದ್ಯ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ.

Share News

About BigTv News

Check Also

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ …

Leave a Reply

Your email address will not be published. Required fields are marked *