Breaking News

ತಂಬಾಕು ಕೊಡದ್ದಕ್ಕೆ ರೊಚ್ಚಿಗೆದ್ದ ಕೈದಿಗಳು, ಕಾರಾಗೃಹ ಸಿಬ್ಬಂದಿ ಮೇಲೆ ಹಲ್ಲೆ

ಕಾರವಾರ: ಜೈಲರ್ ಸೇರಿ ಕಾರಾಗೃಹದ ಮೂವರು ಸಿಬ್ಬಂದಿಯ ಮೇಲೆ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಜೈಲಿನಲ್ಲಿ ಮಾದಕ ವಸ್ತುಗಳನ್ನು ಬಿಡದೆ, ಕಠಿಣ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಿದ್ದಕ್ಕೆ ಈ ರೀತಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಘಟನೆ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು ಮಂಗಳೂರು ಮೂಲದ ರೌಡಿಶೀಟರ್ ಗಳು ಎನ್ನಲಾಗಿದೆ. ಇನ್ನು ಹಲ್ಲೆಗೊಳಗಾದ ಸಿಬ್ಬಂದಿ ಹಾಗೂ ಜೈಲರ್ ಕಾರವಾರ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಈ ಆರೋಪಿಗಳು ಮಂಗಳೂರು ಜೈಲಿನಲ್ಲಿದ್ದರು. ಆ ಬಳಿಕ ಹೆಚ್ಚುವರಿಯಾಗಿದ್ದ ಆರೋಪಿಗಳನ್ನು ಕಾರವಾರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಹ್ವಾಗೆ ಶಿಫ್ಟ್ ಆದ ಬಳಿಕ ಇವರಿಗೆ ಜೈಲಿನಲ್ಲಿ ಕೆಲ ದಿನಗಳಿಂದ ಮಾದಕ ವಸ್ತುಗಳು ಸಂಪೂರ್ಣವಾಗಿ ಸಿಗದನ್ಯೆ ನಿರ್ಬಂಧಿಸಲಾಗಿತ್ತು.ಹೀಗಾಗಿ ಕೈದಿಗಳು ಕಾರಾಗೃಹ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *