Breaking News

ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ‘ಉ-ಕ’ ಪ್ರವಾಸ- ಬಿಜೆಪಿ ವಿರುದ್ಧ ಹೆಚ್ ಡಿಕೆ ವಾಗ್ಬಾಣ

ಆಂಕರ್: ಏರ್‌ಶೋ ವನ್ನ ಬೆಂಗಳೂರಿಂದ ಉತ್ತರ ಪ್ರದೇಶದ ಲಖನೌ ಗೆ ಸ್ಥಳಾಂತರ ಮಾಡಿದ್ದು ಸರಿಯಲ್ಲ. ಲೋಕಸಭಾ ಚುನಾವಣೆಯನ್ನ ದೃಷ್ಟಿಯಲ್ಲಿ ಇಟ್ಟುಕೊಂಡು‌ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳಿವೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಲಖನೌಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರು ಏರಶೋ ನಡೆಸಲು ಅತ್ಯಂತ ಸುಸಜ್ಜಿತ ನಗರವಾಗಿತ್ತು. ಆದ್ರೆ, ಇದನ್ನ ಕಡೆಗಣೆಸಿದ್ದು ನನಗೆ ಈಗ ಬೆಳಕಿಗೆ ಬಂದಿದೆ. ಇನ್ನೂ ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಬಂದಿದ್ದೆನೆ.
ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸ್ಥಳೀಯ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ನಾನು ಇಲ್ಲಿ ಇರುವುದು ಆಗುವುದಿಲ್ಲ. ಇಲ್ಲವಾದಲ್ಲಿ ನಾನು ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಪ್ರವಾಸ ಇಟ್ಟುಕೊಂಡಿದ್ದೆ. ಸ್ಥಳೀಯ ಚುನಾವಣೆ ಮುಗಿದ ನಂತ್ರ ನಾನು ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೆನೆ. ಕೆ ಶಿಫ್ ಕಛೇರಿಯನ್ನ ಹಾಸನಕ್ಕೆ ಸ್ಥಳಾಂತರ ಮಾಡಿದ್ದ ವಿಚಾರ, ಅದು ಅಯಾ ಇಲಾಖೆಗೆ ಬಿಟ್ಟಿದ್ದು. ಆ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ಉಳಿದ ಕಚೇರಿಗಳ ಸ್ಥಳಾಂತರ ಬಗ್ಗೆ ಅವರನ್ನೇ ಕೇಳಿ ಎಂದ್ರು… ಹೆಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.
Share News

About Shaikh BIG TV NEWS, Hubballi

Check Also

ದಾವಣಗೆರೆಯಲ್ಲಿ ಕಾಂಗ್ರೆಸ್ ಒಳಜಗಳ ಸ್ಫೋಟ: Zameer Ahmed Khan ಕೆಣಕಿದರೆ 2028ಕ್ಕೆ 20 ಸೀಟೂ ಕಷ್ಟ!

ದಾವಣಗೆರೆಯಲ್ಲಿ ‘ಕೈ’ ಕಲಹ ಸ್ಫೋಟ: ಜಮೀರ್ ಕೆಣಕಿದರೆ ಕಾಂಗ್ರೆಸ್‌ಗೆ 20 ಸೀಟೂ ಕಷ್ಟ! ಜಮೀರ್ ವಿರುದ್ಧ ಸಂಚು ಆರೋಪ: ಸುಬಾನ್ …

Leave a Reply

Your email address will not be published. Required fields are marked *