Breaking News

ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಮತ್ತೊಂದು ತಿರುವು: ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಗೆ 13 ಬಾರಿ ಕರೆ ಮಾಡಿದ್ದ ಶಾಂತ ಹೊಸಮನಿ!

ಬೆಂಗಳೂರು: ಕೆಪಿಎಸ್‌ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಹಾಗೂ KASಗೆ ಆಯ್ಕೆಯಾದ ಅಭ್ಯರ್ಥಿ ನಡುವೆ ಮೇ 8ರ ಸಂದರ್ಶನಕ್ಕೂ ಮುನ್ನ 13 ಬಾರಿ ದೂರವಾಣಿ ಕರೆ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಭ್ಯರ್ಥಿಯಿಂದ 8 ಹಾಗೂ ಹೊಸಮನಿ ಅವರಿಂದ 5 ಕರೆಗಳು ನಡೆದಿವೆ. ಅಭ್ಯರ್ಥಿ, ವೈದ್ಯೆಯಾಗಿರುವ ಹೊಸಮನಿ ಅವರಿಂದ ಸಲಹೆ ಪಡೆಯಲು ಸಂಪರ್ಕಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಕರೆಗಳಲ್ಲಿ ಏನು ಚರ್ಚಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. CDR, ವಾಟ್ಸಾಪ್ ಹಾಗೂ ಇ-ಮೇಲ್‌ಗಳನ್ನು ಸಿಐಡಿ ಪರಿಶೀಲಿಸುತ್ತಿದೆ. KAS ನೇಮಕಾತಿಯಲ್ಲಿ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂತಿಮ ಆಯ್ಕೆಪಟ್ಟಿ ಪ್ರಕಟಣೆಗೆ ಹೈಕೋರ್ಟ್ ತಡೆ ನೀಡಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *