ಬೆಂಗಳೂರು: 2026ರ ಆಗಸ್ಟ್‌ನಲ್ಲಿ ದೇಶಾದ್ಯಂತ ನಡೆಸಿದ ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ಒಟ್ಟು 220 ಔಷಧ ಮಾದರಿಗಳು NSQ (ನಿಗದಿತ ಗುಣಮಟ್ಟಕ್ಕೆ ಹೊಂದಿಕೆಯಾಗದ) ಎಂದು ಪತ್ತೆಯಾಗಿವೆ. ಕೇಂದ್ರ ಔಷಧ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ 29 ಹಾಗೂ ರಾಜ್ಯಗಳ ಪ್ರಯೋಗಾಲಯಗಳಲ್ಲಿ 191 ಮಾದರಿಗಳು ವಿಫಲವಾಗಿವೆ. ಇದೇ ವೇಳೆ ದೆಹಲಿಯಿಂದ ಸಂಗ್ರಹಿಸಿದ ಒಂದು ಔಷಧ ಮಾದರಿ ನಕಲಿ ಎಂದು ಗುರುತಿಸಲಾಗಿದೆ. ಅನುಮತಿ ಇಲ್ಲದ ತಯಾರಕರು ಮತ್ತೊಂದು ಕಂಪನಿಯ ಬ್ರ್ಯಾಂಡ್ ಹೆಸರನ್ನು ಅಕ್ರಮವಾಗಿ ಬಳಸಿಕೊಂಡು ಔಷಧ ತಯಾರಿಸಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. NSQ ವರದಿ ನಿರ್ದಿಷ್ಟ ಔಷಧದ ಆ ಬ್ಯಾಚ್‌ಗೆ ಮಾತ್ರ ಅನ್ವಯಿಸುತ್ತದೆ ಎಂದು CDSCO ಸ್ಪಷ್ಟಪಡಿಸಿದೆ. ನಕಲಿ ಔಷಧ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ Drugs & Cosmetics Act ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

