ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ 2023ರ ಜೂನ್ 4ರಂದು ಜಮೀನು ಪಾಲು ಹಂಚಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಾಜಿ ಸೈನಿಕ ಸುರೇಶ ಮೃತಪಟ್ಟಿದ್ದರು. ಮತ್ತೊಬ್ಬರಾದ ಸದಾಶಿವ ಅವರಿಗೆ ಗಂಭೀರ ಗಾಯಗಳಾಗಿದ್ದವು. ಪ್ರಕರಣದಲ್ಲಿ ಶಂಕ್ರಪ್ಪ ಮಲ್ಲಸರ್ಜ ಖನಗಾಂವಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಶಿಧರ, ಮಲ್ಲಸರ್ಜ ಹಾಗೂ ಮೀನಾಕ್ಷಿ ಅವರಿಗೆ ತಲಾ 10 ವರ್ಷಗಳ ಕಠಿಣ ಶಿಕ್ಷೆ ನೀಡಲಾಗಿದೆ. ನಾಲ್ವರು ಆರೋಪಿತರಿಗೆ ಒಟ್ಟು ₹1.22 ಲಕ್ಷ ದಂಡ ವಿಧಿಸಿ ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೆ.22ರಂದು ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕ ಆರ್.ಎ. ಬಾರಾವಲಿ ವಾದ ಮಂಡಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

