Breaking News

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸುವ ಜಾಲ ಪತ್ತೆ, ಮೂವರ ಬಂಧನ

ಬೆಂಗಳೂರು: ಕಳ್ಳತನವಾದ ದುಬಾರಿ ಕಾರುಗಳಿಗೆ ನಕಲಿ ಆರ್‌ಸಿ ಹಾಗೂ ಬ್ಯಾಂಕ್ ಎನ್‌ಒಸಿ ಸೃಷ್ಟಿಸುತ್ತಿದ್ದ ಜಾಲವನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಪತ್ತೆಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಸಂತೋಷ್, ಪ್ರಭಾಕರ್ ಹಾಗೂ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಸೋಮೇಶ್ ಬಂಧಿತರು. ಆರೋಪಿಗಳಿಂದ ₹2 ಕೋಟಿ ಮೌಲ್ಯದ 10 ಕಾರುಗಳು, ದ್ವಿಚಕ್ರ ವಾಹನ, ನಕಲಿ ಆರ್‌ಸಿ ಕಾರ್ಡ್‌ಗಳು, ಬ್ಯಾಂಕ್ ಎನ್‌ಒಸಿ ಪತ್ರಗಳು, ನಕಲಿ ಮುದ್ರೆಗಳು, ಕಂಪ್ಯೂಟರ್ ಹಾಗೂ ಡಿಜಿಟಲ್ ಪ್ರಿಂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದುಬಾರಿ ಫಾರ್ಚೂನರ್ ಕಾರು ಮಾರಾಟದ ಹೆಸರಿನಲ್ಲಿ ನೌಶಾದ್ ಖಾನ್ ಅವರಿಗೆ ವಂಚಿಸಿದ ಪ್ರಕರಣದ ತನಿಖೆ ವೇಳೆ ಜಾಲ ಪತ್ತೆಯಾಗಿದೆ. ಸಂತೋಷ್ ಮತ್ತು ಪ್ರಭಾಕರ್ ಸೂಚನೆಯಂತೆ ಸೋಮೇಶ್ ನಕಲಿ ಆರ್‌ಸಿ ಹಾಗೂ ಬ್ಯಾಂಕ್ ಎನ್‌ಒಸಿ ಸಿದ್ಧಪಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *