Breaking News

4 ತಿಂಗಳಲ್ಲಿ ₹161 ಕೋಟಿ ಡ್ರಗ್ಸ್‌ ಜಪ್ತಿ,29 ಮಂದಿ ಬಂಧನ

ಬೆಂಗಳೂರು: ನಗರ ಪೊಲೀಸರು ಕಳೆದ ನಾಲ್ಕು ತಿಂಗಳಲ್ಲಿ ₹161 ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡು 29 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 10 ವಿದೇಶಿ ಪ್ರಜೆಗಳು ಹಾಗೂ ಹೊರರಾಜ್ಯದ 19 ಪೆಡ್ಲರ್‌ಗಳು ಸೇರಿದ್ದಾರೆ. ಏಪ್ರಿಲ್‌ನಲ್ಲಿ ವಿದೇಶದಿಂದ ಡ್ರಗ್ಸ್‌ ಪೂರೈಸುತ್ತಿದ್ದ ಆರೋಪಿಯನ್ನು ಬಂಧಿಸಿ 3.2 ಕೆ.ಜಿ ಡ್ರಗ್ಸ್‌ ಜಪ್ತಿ ಮಾಡಲಾಗಿತ್ತು. ಬಳಿಕ ತನಿಖೆ ಮುಂದುವರಿಸಿದ ಪೊಲೀಸರು ನೋಯ್ಡಾದಿಂದ ಹೆಬ್ಬಾಳ, ಗಿರಿನಗರ ಹಾಗೂ ಬೆಳ್ಳಂದೂರಿಗೆ ಪೂರೈಕೆಯಾಗುತ್ತಿದ್ದ 26.3 ಕೆ.ಜಿ ಎಂಡಿಎಂಎ ಪತ್ತೆಹಚ್ಚಿದ್ದರು. ಜೂನ್‌ನಲ್ಲಿ 22.5 ಕೆ.ಜಿ ಡ್ರಗ್ಸ್‌, 1 ಸಾವಿರ ಎಕ್ಸ್‌ಟಸಿ ಮಾತ್ರೆಗಳು ಹಾಗೂ ₹70 ಲಕ್ಷ ನಗದು ಜಪ್ತಿ ಮಾಡಿ ಆರು ಪೆಡ್ಲರ್‌ಗಳನ್ನು ಬಂಧಿಸಲಾಗಿತ್ತು. ಆಗಸ್ಟ್‌ನಲ್ಲಿ 21 ಕೆ.ಜಿ ಎಂಡಿಎಂಎ ಜಪ್ತಿ ಮಾಡಿ ಮೂವರನ್ನು ಬಂಧಿಸಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಚಂಡೀಗಢದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

Share News

About BigTv News

Check Also

ಸಾಲದ ವಿಚಾರಕ್ಕೆ ಪತಿ-ಪತ್ನಿ ಕಲಹ : ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಕಲಬುರಗಿ: ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ನಡೆದ ಕಲಹ ದುರಂತಕ್ಕೆ ಕಾರಣವಾಗಿದ್ದು, ತಾಯಿ ತನ್ನ ಇಬ್ಬರು ಪುತ್ರಿಯರೊಂದಿಗೆ ಬಾವಿಗೆ …

Leave a Reply

Your email address will not be published. Required fields are marked *