Breaking News

ಬಾಲಕಿಗೆ ಲೈಂಗಿಕ ಕಿರುಕುಳ: ಇಬ್ಬರ ವಿರುದ್ಧ ಪೋಕ್ಸೊ ಕೇಸು

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಆಕೆಯ ಸಂಬಂಧಿಕ ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಓಣಂ ಪರೀಕ್ಷೆ ಮುಗಿದ ಬಳಿಕ ಬಾಲಕಿಯನ್ನು ಮೈಸೂರಿಗೆ ಕರೆದೊಯ್ದ ಸಂದರ್ಭದಲ್ಲಿ ಸಂಬಂಧಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಮೈಸೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಬ್ಬ ವ್ಯಕ್ತಿ ಕೂಡ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಬಾಲಕಿ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಒಂದು ಕಾಲ್ ಮಾಡಬೇಕಿತ್ತು, ಪೋನ್ ಕೊಡ್ತೀರಾ ಅಂತ ಯಾರಾದ್ರೂ ಕೇಳಿದ್ರೆ ಎಚ್ಚರ!

ಮಂಡ್ಯ: ಅಪರಿಚಿತ ಮಹಿಳೆಗೆ ಮೊಬೈಲ್ ಕರೆ ಮಾಡಲು ಫೋನ್ ನೀಡಿದ್ದ ಯುವಕನೊಬ್ಬ ಕೊಲೆ ಆರೋಪ ಎದುರಿಸಿ ಎರಡೂವರೆ ವರ್ಷ ಜೈಲು …

Leave a Reply

Your email address will not be published. Required fields are marked *