Breaking News

ಪತ್ನಿ ಜೊತೆ ಜಗಳ: ಮಧ್ಯೆ ಬಂದ ಮಗನನ್ನೇ ಕೊಂದ ತಂದೆ

ಕುಣಿಗಲ್: ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಸುನೀಲ್ (16) ಕೊಲೆಯಾದ ಬಾಲಕನಾಗಿದ್ದು, ತಂದೆ ನಂಜೇಗೌಡ (45) ಆರೋಪಿ. ನಂಜೇಗೌಡ ಪತ್ನಿ ರಂಜಿತಾ ಜತೆ ಜಗಳವಾಡುತ್ತಿದ್ದಾಗ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದ ಮಗ ಸುನೀಲ್ ಮಧ್ಯೆ ಅಡ್ಡ ಬಂದಿದ್ದಾನೆ. ಈ ವೇಳೆ ಕೋಪಗೊಂಡ ತಂದೆ ಹಾರೇಕೋಲಿನಿಂದ ಮಗನಿಗೆ ಹೊಡೆದು ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಕೊಲೆ: ಮೃತದೇಹ ಸುಟ್ಟು ನದಿಗೆ ಎಸೆದ ಆರೋಪ; ನಾಲ್ವರ ಬಂಧನ

ಬಳ್ಳಾರಿ: ಹಣಕಾಸಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಮೂಳೆ ಹಾಗೂ ಬೂದಿಯನ್ನು …

Leave a Reply

Your email address will not be published. Required fields are marked *