Breaking News

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ : ಯುವಕ ಅರೆಸ್ಟ್!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು AI ತಂತ್ರಜ್ಞಾನ ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿದ ಆರೋಪದ ಮೇಲೆ ಕಡಬ ಮೂಲದ ಯಜ್ಞೇಶ್ ಬಿ.ಜೆ. ರೈ (22) ಎಂಬಾತನನ್ನು ಬರ್ಕೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ET&PST ಪರೀಕ್ಷೆಯ ವೇಳೆ ಅಭ್ಯರ್ಥಿಗಳ ದಾಖಲೆ ಪರಿಶೀಲಿಸುವಾಗ ಯಜ್ಞೇಶ್ ನೀಡಿದ್ದ ಹಾಲ್‌ಟಿಕೆಟ್‌ ಅನುಮಾನಕ್ಕೆ ಕಾರಣವಾಗಿದೆ. KEA ಸಾಫ್ಟ್‌ವೇರ್‌ನಲ್ಲಿ ಪರಿಶೀಲಿಸಿದಾಗ CPC5225446 ಅರ್ಜಿ ಸಂಖ್ಯೆ ಹೊಂದಿದ್ದ ಈತನ ಹೆಸರು 1:5 ಅರ್ಹತಾ ಪಟ್ಟಿಯಲ್ಲಿ ಕಂಡುಬಂದಿಲ್ಲ. ಬಳಿಕ ಪರಿಶೀಲಿಸಿದಾಗ ಹಾಲ್‌ಟಿಕೆಟ್ ನಕಲಿ ಎಂಬುದು ಪತ್ತೆಯಾಗಿದೆ. ವಿಚಾರಣೆ ವೇಳೆ ಯಜ್ಞೇಶ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲಿಲ್ಲ ಎಂಬುದು ತಿಳಿದುಬಂದಿದೆ. ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್‌ಟಿಕೆಟ್ ಪಡೆದು, AI ಹಾಗೂ ಡಿಜಿಟಲ್ ಎಡಿಟಿಂಗ್ ಮೂಲಕ ಹೆಸರು ಮತ್ತು ವಿವರಗಳನ್ನು ಬದಲಿಸಿ ನಕಲಿ ಹಾಲ್‌ಟಿಕೆಟ್ ಸಿದ್ಧಪಡಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *