Breaking News

ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ: ಯುವಕನ ಕೊಲೆ ಆರೋಪಿ 9 ಗಂಟೆಗಳಲ್ಲೇ ಅರೆಸ್ಟ್

ಚಿತ್ರದುರ್ಗ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾದ ಕೇವಲ 9 ಗಂಟೆಗಳಲ್ಲೇ ಬಂಧಿಸಿದ್ದಾರೆ. ಶಿವಗಂಗಾ ಗ್ರಾಮದ ರಂಗಸ್ವಾಮಿ (26) ಕೊಲೆಯಾದವರು. ಚೇಳುಗುಡ್ಡ ಗ್ರಾಮದ ಜನಾರ್ಧನ ಬಂಧಿತ ಆರೋಪಿ. ಸೆ.26ರಂದು ರಂಗಸ್ವಾಮಿಯನ್ನು ಜಾನುಕೊಂಡ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಾತನಾಡಿಸಿ ಕರೆದುಕೊಂಡು ಹೋದ ಜನಾರ್ಧನ, ಮದ್ಯಪಾನ ಮಾಡಿಸಿ ಈರಜ್ಜನಹಟ್ಟಿ ಗೇಟ್ ಬಳಿಯ ಗುಡ್ಡ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಹಲ್ಲೆ ನಡೆಸಿ, ತಪ್ಪಿಸಿಕೊಂಡು ಓಡಲು ಯತ್ನಿಸಿದ ರಂಗಸ್ವಾಮಿಯನ್ನು ನೆಲಕ್ಕೆ ಕೆಡವಿ ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೃತ್ಯದ ಬಳಿಕ ಆರೋಪಿ ತನ್ನ ಸ್ನೇಹಿತ ಗುರುಕಿರಣ್‌ಗೆ ವಿಷಯ ತಿಳಿಸಿದ್ದು, ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ತೆರಳಿದ ಪೊಲೀಸರು ರಂಗಸ್ವಾಮಿಯ ಶವ ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಡಿವೈಎಸ್‌ಪಿ ಅರುಣ್ ನಾಗೇಗೌಡ ನೇತೃತ್ವದ ವಿಶೇಷ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ 9 ಗಂಟೆಗಳಲ್ಲೇ ಜನಾರ್ಧನನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

Share News

About BigTv News

Check Also

ಗೃಹಪ್ರವೇಶವಾಗಿ ಒಂದೇ ತಿಂಗಳಿಗೆ ಹೊಸ ಮನೆಗೆ ಕನ್ನ! ದಂಪತಿಗೆ ಲಾಂಗ್‌, ಮಚ್ಚು ತೋರಿಸಿ ದರೋಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಗೃಹಪ್ರವೇಶವಾಗಿ ಒಂದು ತಿಂಗಳಷ್ಟೇ ಕಳೆದಿದ್ದ ನೂತನ ಮನೆಗೆ ನುಗ್ಗಿದ ಮೂವರು …

Leave a Reply

Your email address will not be published. Required fields are marked *