ಬೆಂಗಳೂರು: ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಖದೀಮನೊಬ್ಬ ವೃದ್ಧೆಗೆ ಟೀ ಕುಡಿಸಿ ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ 66 ವರ್ಷದ ಚೆನ್ನಮ್ಮ ಮೈಸೂರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತುವ ವೇಳೆ ವೃದ್ಧೆಯನ್ನು ಹಿಂಬಾಲಿಸಿದ ಆರೋಪಿ, ಅವರು ನಿರಾಕರಿಸಿದರೂ ಟೀ ತಂದುಕೊಟ್ಟಿದ್ದಾನೆ. ಟೀ ಸೇವಿಸಿದ ಬಳಿಕ ಚೆನ್ನಮ್ಮ ನಿದ್ರೆಗೆ ಜಾರಿದ್ದಾರೆ ಎನ್ನಲಾಗಿದ್ದು, ಈ ವೇಳೆ ಆರೋಪಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಘಟನೆ ಬಳಿಕ ಎಚ್ಚರಗೊಂಡ ಚೆನ್ನಮ್ಮ ಚಿನ್ನಾಭರಣ ಕಳವಾಗಿರುವುದನ್ನು ಗಮನಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

