Breaking News

ಸಚಿವ ಹೆಚ್.ಬಾಲಕೃಷ್ಣ 600 ಕೋಟಿ ಸರ್ಕಾರಿ ಜಾಮೀನು ಕಬಳಿಕೆ : ಎ.ಮಂಜು ಗಂಭೀರ ಆರೋಪ!

ಬೆಂಗಳೂರು: ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ಸುಮಾರು 36 ಎಕರೆ ಸರ್ಕಾರಿ ಜಮೀನನ್ನು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರು ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಎ. ಮಂಜುನಾಥ್ ಆರೋಪಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿ ವಿಚಾರಣೆಗೆ ಅನುಮತಿ ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ. ಸರ್ವೇ ನಂಬರ್ 158ರಲ್ಲಿರುವ ಜಮೀನಿನ ಪೈಕಿ 10 ಎಕರೆ ಸಚಿವರ ಪತ್ನಿಯ ಹೆಸರಿಗೆ ಹಾಗೂ 26 ಎಕರೆ ನಟರಾಜ ನಾಯ್ಡು ಎಂಬುವರ ಹೆಸರಿಗೆ ನೋಂದಣಿ ಮಾಡಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಮಂಜುನಾಥ್ ಆರೋಪಿಸಿದರು. ಈ ಕುರಿತು 500ಕ್ಕೂ ಹೆಚ್ಚು ದಾಖಲೆಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಬಡ ರೈತರಿಗೆ ಬೆದರಿಕೆ ಹಾಕಿ ಜಮೀನು ಕಬಳಿಸಲಾಗಿದೆ ಎಂದು ದೂರಿದರು. ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಿಕೊಳ್ಳಲು ಸಂಚು ನಡೆದಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಜಮೀನನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಶುಕ್ರವಾರ ಕೇಂದ್ರ ಸಚಿವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದರು.

Share News

About BigTv News

Check Also

ಬೆಂಗಳೂರು: ವೃದ್ಧೆಗೆ ನಿದ್ದೆ ಮಾತ್ರೆ ಬೆರೆಸಿದ ಟೀ ಕುಡಿಸಿ ಚಿನ್ನಾಭರಣ ಕಳವು

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯನ್ನು ಸಲುಗೆಯಿಂದ ಮಾತನಾಡಿಸಿ, ನಿದ್ದೆ ಮಾತ್ರೆ ಬೆರೆಸಿದ ಟೀ …

Leave a Reply

Your email address will not be published. Required fields are marked *